ನವದೆಹಲಿ: 2013-14ರ ಏಪ್ರಿಲ್-ಅಕ್ಟೋಬರ್ ಅವಧಿಗೆ ಹೋಲಿಸಿದರೆ 2022-23ರ ಏಪ್ರಿಲ್-ಅಕ್ಟೋಬರ್ನಲ್ಲಿ ಭಾರತದ ಫಾರ್ಮಾ ರಫ್ತುಗಳು 138 ಪ್ರತಿಶತದಷ್ಟು ಹೆಚ್ಚಾಗಿದೆ.
ಭಾರತದ ಫಾರ್ಮಾ ಉತ್ಪನ್ನಗಳ ರಫ್ತು 2013 ರ ಇದೇ ಅವಧಿಗೆ ಹೋಲಿಸಿದರೆ 2022 ರ ಏಪ್ರಿಲ್ನಿಂದ ಅಕ್ಟೋಬರ್ ವರೆಗೆ ಶೇಕಡಾ 138 ರಷ್ಟು ಪ್ರಚಂಡ ಬೆಳವಣಿಗೆಯನ್ನು ದಾಖಲಿಸಿದೆ. 2013 ರ ಇದೇ ಅವಧಿಯಲ್ಲಿ ಸುಮಾರು 37,988 ಕೋಟಿಯ ಫಾರ್ಮಾ ಉತ್ಪನ್ನಗಳನ್ನು ರಫ್ತು ಮಾಡಲಾಗಿತ್ತು. 2022ರಲ್ಲಿ ಇದು 90,324.23 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ದೇಶದ ಫಾರ್ಮಾ ಉತ್ಪನ್ನಗಳ ರಫ್ತು 90,000 ಕೋಟಿಗೆ ಏರಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಜಾಗತಿಕ ಫಾರ್ಮಾ ಪವರ್ಹೌಸ್ ಆಗಿ ಹೊರಹೊಮ್ಮಿದೆ ಎಂದು ಅವರು ಹೇಳಿದ್ದಾರೆ.
ಭಾರತದ ಫಾರ್ಮಾ ರಫ್ತುಗಳು 2013-14ರ ಏಪ್ರಿಲ್-ಅಕ್ಟೋಬರ್ ತಿಂಗಳಿನಿಂದ ಶೇಕಡಾ 138 ರಷ್ಟು ಬೆಳವಣಿಗೆಯನ್ನು ಕಂಡಿದೆ, 2013-14 ರಲ್ಲಿ 37,987.68 ಕೋಟಿಗಳಿಂದ 2021-22 ರಲ್ಲಿ 90,324.23 ಕೋಟಿಗಳಿಗೆ ಏರಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.