ಬೆಂಗಳೂರು: ಭಾರತದ ಸುಮಾರು 400 ರೈಲ್ವೇ ಸ್ಟೇಶನ್ಗಳಿಗೆ ಉಚಿತ ವೈಫೈ ಸೌಲಭ್ಯ ಕಲ್ಪಿಸಲು ಗೂಗಲ್ ಮುಂದಾಗಿದೆ.
ಗೂಗಲ್ ಮತ್ತು ಭಾರತೀಯ ರೈಲ್ವೇ ಜಂಟಿ ಸಹಯೋಗದೊಂದಿಗೆ ಇದು ಜಾರಿಗೆ ಬರಲಿದ್ದು, ಈ ಸೇವೆಗೆ ಗೂಗಲ್ ಫೈಬರ್ ಪ್ರಾಜೆಕ್ಟ್ನ್ನು ಬಳಕೆ ಮಾಡಲಾಗುತ್ತಿದೆ. ‘ನಿಲ್ಗಿರಿ’ ಎಂಬ ಹೆಸರಿನಡಿ ಈ ಯೋಜನೆಯನ್ನು ಭಾರತೀಯ ನಗರಗಳಲ್ಲಿ ವಿಸ್ತಾರಗೊಳಿಸುವುದಾಗಿ ಗೂಗಲ್ ಹೇಳಿಕೊಂಡಿದೆ.
ಈ ಯೋಜನೆಯಡಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ದೇಶದಾದ್ಯಂತ ಆಯ್ದ ರೈಲ್ವೇ ಸ್ಟೇಶನ್ಗಳಲ್ಲಿ ವೈಫೈ ಹಾಟ್ಸ್ಪಾಟ್ಸ್ಗಳನ್ನು ಸ್ಥಾಪಿಸಲು ಭಾರತೀಯ ರೈಲ್ವೇ ಮತ್ತು ಗೂಗಲ್ ನಿರ್ಧರಿಸಿದೆ.
ಈ ಸೇವೆಯ ಅನ್ವಯ ರೈಲು ಪ್ರಯಾಣಿಕರು 34 ನಿಮಿಷಗಳ ಕಾಲ ಹೈ ಸ್ಪೀಡ್ನಲ್ಲಿ ಉಚಿತವಾಗಿ ಇಂಟರ್ನೆಟ್ ಪಡೆಯಬಹುದು, ಬಳಿಕ ಇದರ ಸ್ಪೀಡ್ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.
ತುಂಬಾ ಆಸಕ್ತಿದಾಯಕ ಯೋಜನೆ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಕನಸಿಗೆ ಪೂರಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.