ನವದೆಹಲಿ: ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್ ಅನ್ನು ಉಡಾವಣೆ ಮಾಡುವ ಮೂಲಕ ಇತಿಹಾಸ ನಿರ್ಮಾಣ ಮಾಡಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಹತ್ವದ ಹೆಜ್ಜೆ ಇದಾಗಿರುವುದರಿಂದ ಉಡಾವಣೆಯು ಇತಿಹಾಸವನ್ನು ನಿರ್ಮಿಸಿದೆ, ಖಾಸಗಿ ವಲಯದೊಂದಿಗೆ ಇಸ್ರೋದ ಸಂಬಂಧವನ್ನು ಇದು ಬೆಳೆಸಲಿದೆ.
ವಿಕ್ರಮ್-ಸಬಾರ್ಬಿಟಲ್ (ವಿಕೆಎಸ್) ರಾಕೆಟ್ನ ಐತಿಹಾಸಿಕ ಚೊಚ್ಚಲ ಖಾಸಗಿ ಉಡಾವಣೆಯನ್ನು ಶ್ರೀಹರಿಕೋಟಾದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸಚಿವ ಡಾ ಜಿತೇಂದ್ರ ಸಿಂಗ್ ಅವರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಸರ್ಕಾರೇತರ ಘಟಕ ಮತ್ತು ಸ್ಟಾರ್ಟ್ಅಪ್ ಆದ ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ವಿಕೆಎಸ್ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ. ಇದು ಸುಮಾರು 550 ಕಿಲೋಗ್ರಾಂಗಳಷ್ಟು ದ್ರವ್ಯರಾಶಿಯನ್ನು ಹೊಂದಿರುವ ಏಕ ಹಂತದ ಸ್ಪಿನ್ ಸ್ಟೆಬಿಲೈಸ್ಡ್ ಘನ ಪ್ರೊಪೆಲ್ಲಂಟ್ ರಾಕೆಟ್ ಆಗಿದೆ. ರಾಕೆಟ್ ಗರಿಷ್ಠ 101 ಕಿಲೋಮೀಟರ್ ಎತ್ತರಕ್ಕೆ ಹೋಗಿ ಸಮುದ್ರಕ್ಕೆ ಚಿಮ್ಮಿದೆ. ಉಡಾವಣೆಯ ಒಟ್ಟಾರೆ ಅವಧಿಯು 300 ಸೆಕೆಂಡುಗಳು ಎಂದು ಇಸ್ರೋ ಹೇಳಿದೆ.
Launched! Vikram-S makes history as the first private rocket of India to grace the skies. We thank you all for being with us for this momentous occasion. More details of flight to follow. Keep watching https://t.co/p2DOuRFiIA#Prarambh #OpeningSpaceForAll pic.twitter.com/jm4u6mJhsL
— Skyroot Aerospace (@SkyrootA) November 18, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.