ನವದೆಹಲಿ: ರೈಲು ಸಂಚಾರದ ಸಂದರ್ಭದಲ್ಲಿ ಜಾನುವಾರುಗಳು ಅಡ್ಡ ಬಂದು ಅನಾಹುತ ನಡೆಯುತ್ತಿರುವ ಘಟನೆಗಳು ಪದೇ ಪದೇ ನಡೆಯುತ್ತಿರುವ ಕಾರಣ ಭಾರತೀಯ ರೈಲ್ವೇಯು ಪ್ರಮುಖ ಮಾರ್ಗಗಳಲ್ಲಿ ವಿವಿಧ ವಿಭಾಗಗಳಲ್ಲಿ ಫಾಸ್ಟ್ ಟ್ರ್ಯಾಕ್ ಮೋಡ್ನಲ್ಲಿ ಸುಮಾರು 1,000 ಕಿಮೀ ಟ್ರ್ಯಾಕ್ಗೆ ಗಡಿ ಗೋಡೆ ನಿರ್ಮಿಸಲು ನಿರ್ಧರಿಸಿದೆ.
ಗುರುತಿಸಲಾದ ಹಳಿಗಳ ಎರಡೂ ಬದಿಗಳಲ್ಲಿ ಗಡಿ ಗೋಡೆ ಕಟ್ಟುವ ಸಲುವಾಗಿ ರೈಲ್ವೆ ಹೊಸ ವಿನ್ಯಾಸವನ್ನು ಅಂತಿಮಗೊಳಿಸಿದ್ದು ಅದನ್ನು ತ್ವರಿತವಾಗಿ ಅಳವಡಿಸಲಿದೆ.
“ಜಾನುವಾರು ಓಡಾಡುವುದನ್ನು ತಡೆಯಲು ಗಡಿ ಗೋಡೆಯ ಹೊಸ ವಿನ್ಯಾಸವನ್ನು ಅನುಮೋದಿಸಲಾಗಿದೆ. ಈ ಗೋಡೆಯನ್ನು ಮುಂಬರುವ 5-6 ತಿಂಗಳ ಅವಧಿಯಲ್ಲಿ ಅಳವಡಿಸಲಾಗುವುದು” ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇತ್ತೀಚೆಗೆ ರೈಲ್ವೇಯ ಪ್ರಧಾನ ಸೇವೆಯಾದ ವಂದೇ ಭಾರತ್ ಎಕ್ಸ್ಪ್ರೆಸ್ ಮೂರು ಬಾರಿ ಜಾನುವಾರುಗಳಿಗೆ ಗುದ್ದಿದೆ.
ಅಂಕಿಅಂಶಗಳ ಪ್ರಕಾರ, ಈ ವರ್ಷ ಇದುವರೆಗೆ ಸುಮಾರು 4,000 ರೈಲು ಸಂಚಾರದ ವೇಳೆ ಜಾನುವಾರು ಓಡಾಡಿ ಅನಾಹುತ ಸಂಭವಿಸಿದ ಘಟನೆ ನಡೆದಿದೆ.
ಗಡಿ ಗೋಡೆ ಹಾಕುವ ಕ್ರಮವು ಜಾನುವಾರುಗಳ ಓಡಾಟವನ್ನು ತಡೆಯುವುದಲ್ಲದೆ, ಮಾನವ ಸಂಚಾರವನ್ನೂ ನಿಗ್ರಹಿಸುತ್ತದೆ. ದೆಹಲಿ-ಮುಂಬೈ ಮತ್ತು ದೆಹಲಿ-ಹೌರಾ ಮಾರ್ಗಗಳ ಕೆಲವು ವಿಭಾಗಗಳಲ್ಲಿಲು ಆದ್ಯತೆಯ ಮೇಲೆ ಬೇಲಿ ಹಾಕಲಾಗುತ್ತದೆ.
“ನಾವು ಗಡಿ ಗೋಡೆಗಳನ್ನು ನಿರ್ಮಿಸುವ ವಿಷಯದ ಬಗ್ಗೆ ಗಂಭೀರವಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಎರಡು ವಿಭಿನ್ನ ವಿನ್ಯಾಸಗಳನ್ನು ನೋಡುತ್ತಿದ್ದೇವೆ. ನಾವು ಗಟ್ಟಿಮುಟ್ಟಾದ ಗೋಡೆಯನ್ನು ಅನುಮೋದಿಸಿದ್ದೇವೆ, ಮುಂದಿನ ಐದಾರು ತಿಂಗಳಲ್ಲಿ ನಾವು ಅಂತಹ ಗೋಡೆಗಳನ್ನು 1,000 ಕಿಮೀ ನಿರ್ಮಿಸಲು ಯೋಜಿಸಿದ್ದೇವೆ” ಎಂದು ವೈಷ್ಣವ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.