ಬೀಜಿಂಗ್: ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಕಾರ್ಮಿಕರ ಹೊರೆ ಇಳಿಸಲು ರೋಬೋಟ್ಗಳ ಬಳಕೆ ಮಾಡಲಾಗುತ್ತದ. ಇದೀಗ ಮಾಧ್ಯಮ ಲೋಕಕ್ಕೂ ರೋಬೋಗಳು ಕಾಲಿಟ್ಟಿವೆ.
ರೋಬೋವೊಂದರ 916 ಪದಗಳ ವಾಣಿಜ್ಯ ವರದಿಯ ದೋಷರಹಿತ ಲೇಖನವೊಂದು ಚೀನಾದಲ್ಲಿ ಪ್ರಕಟವಾಗಿದೆ. ಈ ರೋಬೋಟ್ನ್ನು ಟೆನ್ಸೆಂಟ್ ಕಂಪೆನಿ ಅಭಿವೃದ್ಧಿಪಡಿಸಿದ್ದು, ಚೀನಾದ ಜನಪ್ರಿಯ ಕ್ಷಿಪ್ರ ಸಂದೇಶ ತಾಣ ಕ್ಯುಕ್ಯು.ಕಾಂ(www.qq.com)ನಲ್ಲಿ ಟೆನ್ಸೆಂಟ್ ಬಿಡುಗಡೆ ಮಾಡಿದೆ. ಇದಕ್ಕೆ ’ಡ್ರೀಮ್ರೈಟರ್’ ಎಂದು ಹೆಸರಿಸಲಾಗಿದೆ ಎಂದು ಚೀನಾದ ವರದಿಗಾರ ಲಿ ವೀ ತಿಳಿಸಿದ್ದಾರೆ.
ಚೀನಾದ ಗ್ರಾಹಕ ದರ ಸೂಚ್ಯಂಕ ವಿಚಾರವಾಗಿ ಬರೆದಿರುವ ಈ ಲೇಖನ ಚೀನಾ ಭಾಷೆಯಲ್ಲಿ ರಚಿಸಲಾಗಿದ್ದು, ರೋಬೋಟ್ ಈ ಲೇಖನವನ್ನು ಕೇವಲ 1 ನಿಮಿಷದಲ್ಲಿ ಪೂರ್ಣಗೊಳಿಸಿದೆ. ಇದರಿಂದ ಡೆಡ್ಲೈನ್ ತಪ್ಪಲು ಸಾಧ್ಯವಿಲ್ಲ. ಅಲ್ಲದೇ ಯಾವುದೇ ತಪ್ಪುಗಳು ಕಂಡು ಬರುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.