ನವದೆಹಲಿ: ವಿಶ್ವದ ಜನಸಂಖ್ಯೆಯು 8 ಶತಕೋಟಿ ತಲುಪಲಿದೆ ಎಂದು ವಿಶ್ವಸಂಸ್ಥೆಯ ವರದಿ ಅಂದಾಜಿಸಿದೆ. ಜಾಗತಿಕ ಸಂಸ್ಥೆಯಾದ ವಿಶ್ವಸಂಸ್ಥೆ ಇದನ್ನು ಮಾನವ ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸಿದೆ.
“ಸಾರ್ವಜನಿಕ ಆರೋಗ್ಯ, ಪೋಷಣೆ, ವೈಯಕ್ತಿಕ ನೈರ್ಮಲ್ಯ ಮತ್ತು ಔಷಧದಲ್ಲಿನ ಸುಧಾರಣೆಗಳಿಂದಾಗಿ ಮಾನವ ಜೀವಿತಾವಧಿಯಲ್ಲಿ ಕ್ರಮೇಣ ಹೆಚ್ಚಳದಿಂದಾಗಿ ಈ ಅಭೂತಪೂರ್ವ ಬೆಳವಣಿಗೆಯಾಗಿದೆ. ಕೆಲವು ದೇಶಗಳಲ್ಲಿ ಹೆಚ್ಚಿನ ಮತ್ತು ನಿರಂತರ ಮಟ್ಟದ ಫಲವತ್ತತೆಯ ಪರಿಣಾಮವಾಗಿ ಜನಸಂಖ್ಯೆ ಹೆಚ್ಚಾಗುತ್ತಿದೆ” ಎಂದು ಅದು ಹೇಳಿದೆ.
ಜಾಗತಿಕ ಜನಸಂಖ್ಯೆಯು 7 ರಿಂದ 8 ಶತಕೋಟಿಗೆ ಬೆಳೆಯಲು 12 ವರ್ಷಗಳನ್ನು ತೆಗೆದುಕೊಂಡರೆ, ಅದು 9 ಶತಕೋಟಿಯನ್ನು ತಲುಪಲು ಸರಿಸುಮಾರು 15 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ.
ಜನ ಸಂಖ್ಯೆಯಲ್ಲಿ ಎರಡನೇ ಸ್ಥಾನ ಪಡೆದಿರುವ ಭಾರತ ಮೊದಲ ಸ್ಥಾನಕ್ಕೆ ಏರುವ ಸಾಧ್ಯತೆಗಳು ಹೆಚ್ಚಾಗಿವೆ. ವರದಿಯ ಪ್ರಕಾರ 2023ರಲ್ಲಿ ಭಾರತವು ಚೀನಾವನ್ನು ಹಿಂದಿಕ್ಕೆ ವಿಶ್ವದ ಅತಿ ಹೆಚ್ಚು ಜನ ಸಂಖ್ಯೆ ಹೊಂದಿರುವ ದೇಶವಾಗಲಿದೆ.
ವಿಶ್ವಸಂಸ್ಥೆಯ ಪ್ರಕಾರ, ಜಾಗತಿಕ ಜನಸಂಖ್ಯೆಯು 2030 ರಲ್ಲಿ ಸುಮಾರು 8.5 ಶತಕೋಟಿ, 2050 ರಲ್ಲಿ 9.7 ಶತಕೋಟಿ ಮತ್ತು 2080 ರಲ್ಲಿ ಸುಮಾರು 10.4 ಶತಕೋಟಿ ಬೆಳೆಯಬಹುದು. 2100ರವರೆಗೆ ಅದೇ ಸಂಖ್ಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ವಿಶ್ವ ಜನಸಂಖ್ಯಾ ದಿನದಂದು ಸೋಮವಾರ ಬಿಡುಗಡೆಯಾದ ವಾರ್ಷಿಕ ವಿಶ್ವ ಜನಸಂಖ್ಯೆಯ ಪ್ರಾಸ್ಪೆಕ್ಟ್ ವರದಿಯು ಜಾಗತಿಕ ಜನಸಂಖ್ಯೆಯು 1950 ರಲ್ಲಿ ಇದ್ದ 2.5 ಶತಕೋಟಿ ಜಾಗತಿಕ ಜನಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.