ನವದೆಹಲಿ: ಭಾರತೀಯ ರೈಲ್ವೆ ತನ್ನ ಸಂಪೂರ್ಣ ಬ್ರಾಡ್ ಗೇಜ್ ಜಾಲದ ವಿದ್ಯುದ್ದೀಕರಣದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಮಹತ್ವದ ಸಾಧನೆ ಮಾಡಿದೆ. ರೈಲ್ವೆಯ ಶೇಕಡಾ 82.08ರಷ್ಟು ಬ್ರಾಡ್ ಗೇಜ್ ನೆಟ್ವರ್ಕ್ ವಿದ್ಯುದ್ದೀಕರಣಗೊಂಡಿದೆ.
ಇದು ಉತ್ತಮ ಇಂಧನ ಶಕ್ತಿಯ ಬಳಕೆಗೆ ಕಾರಣವಾಗುವುದಲ್ಲದೆ, ಇಂಧನ ವೆಚ್ಚವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಅಮೂಲ್ಯವಾದ ವಿದೇಶಿ ವಿನಿಮಯದಲ್ಲೂ ಉಳಿತಾಯವಾಗುತ್ತದೆ.
ಹಣಕಾಸು ವರ್ಷ 2021-22ರ 895 ರೂಟ್ ಕಿಮೀಗಳಿಗೆ ಹೋಲಿಸಿದರೆ 2022-23 ರ ಆರ್ಥಿಕ ವರ್ಷದಲ್ಲಿ, ರೈಲ್ವೆಯು 1,223 ರೂಟ್ ಕಿಲೋಮೀಟರ್ಗಳನ್ನು (ಆರ್ಕೆಎಂ) ವಿದ್ಯುದ್ದೀಕರಣವನ್ನು ಸಾಧಿಸಿದೆ. ಇದು ಹಿಂದಿನ ವರ್ಷದ ಅಂಕಿಅಂಶಗಳಿಗಿಂತ ಶೇ.36.64 ರಷ್ಟು ಹೆಚ್ಚು.
31 ಅಕ್ಟೋಬರ್ 2022 ರಂತೆ ಭಾರತೀಯ ರೈಲ್ವೆಯ ಒಟ್ಟು ಬ್ರಾಡ್ ಗೇಜ್ ನೆಟ್ವರ್ಕ್ 65,141 RKM ಪೈಕಿ 53,470 BG RKM ವಿದ್ಯುದ್ದೀಕರಿಸಲ್ಪಟ್ಟಿದೆ, ಇದು ಒಟ್ಟು ಬ್ರಾಡ್ ಗೇಜ್ ನೆಟ್ವರ್ಕ್ನ ಶೇಕಡಾ 82.08 ಆಗಿದೆ.
ಕ್ಷಿಪ್ರ ವಿದ್ಯುದೀಕರಣದೊಂದಿಗೆ, ಹೆಚ್ಚು ಹೆಚ್ಚು ರೈಲುಗಳನ್ನು ಡೀಸೆಲ್ ಲೊಕೊಗಳ ಬದಲು ವಿದ್ಯುತ್ ಇಂಜಿನ್ಗಳಿಂದ ಓಡಿಸಲಾಗುತ್ತದೆ..
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.