ಬಂಟ್ವಾಳ : ರೈತರಿಗೆ ಆತ್ಮಸ್ಥೈರ್ಯ ತುಂಬಲು ಬಿಜೆಪಿ ನಿಮ್ಮ ಜತೆಗಿದೆ. ಎಂದು ಧೈರ್ಯ ತುಂಬಲು ಮತ್ತು ಪರಿಸ್ಥಿತಿಗೆ ಕಂಗೆಟ್ಟು ಜೀವಕ್ಕೆ ಅಪಾಯ ತಂದುಕೊಳ್ಳಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ರೈತರಿಗೆ ಹೇಳಿದ್ದಾರೆ.
ಅವರು ಬಂಟ್ವಾಳದ ಗಾಣದಪಡ್ಪು ಬ್ರಹ್ಮಶ್ರೀನಾರಾಯಣ ಗುರುಮಂದಿರ ಸನಿಹ ಮೈದಾನದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ರೈತರಲ್ಲಿ ಧೈರ್ಯ ತುಂಬಲು ಕರ್ನಾಟಕ ರಾಜ್ಯ ಸರಕಾರದ ವಿಫಲವಾಗಿದೆ. ಸರಕಾರದ ಆಡಳಿತ ವೈಫಲ್ಯದಿಂದ ಈ ಪರಿಸ್ಥಿತಿ ಉದ್ಭವಿಸಲು ಕಾರಣ ಎಂದು ಆರೋಪಿಸಿದರು.ರಾಜ್ಯ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮಾತನಾಡಿ ಭಂಡತನಕ್ಕೆ ಸಿದ್ದರಾಮಯ್ಯ ಸರಕಾರಕ್ಕೆ ಭಂಡತನಕ್ಕೆ ಇನ್ನೊಂದು ಹೆಸರು. ಅನ್ನಭಾಗ್ಯ ನೀಡಿದಂತೆ ರಾಜ್ಯ ಸರಕಾರ ಜನತೆಗೆ ಕತ್ತಲೆ ಭಾಗ್ಯವನ್ನು ನೀಡಿದೆ ಎಂದು ಟಾಂಗ್ ನೀಡಿದರು.
ಹಿಂದುಗಳ ಹಬ್ಬ ಗಣೆಶೋತ್ಸವ ಉತ್ಸವಕ್ಕೆ ವಿದ್ಯುತ್ ನೀಡುವುದಿಲ್ಲ ಎನ್ನುವ ಸರಕಾರ ಇತರ ಧರ್ಮಿಯರ ಹಬ್ಬದ ಸಂದರ್ಭದಲ್ಲಿ ವಿದ್ಯುತನ್ನು ನೀಡುದಿಲ್ಲ ಎಂಬ ಮಾತನ್ನು ಹೇಳುವ ಧೈರ್ಯ ತೋರುತ್ತದೆಯೇ ಎಂದು ಸವಾಲೆಸೆದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಬರಲಿದೆ. ಆಗ ನಮ್ಮ ಮೊದಲ ಹೆಜ್ಜೆ ರಾಜ್ಯದ ಎಲ್ಲಾ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿದೆ ಎಂದರು. ಸಂಸದ ನಳಿನ್ ಕುಮಾರ್ ಕಟೀಲ್, ತೇಜಸ್ವಿನಿ ರಮೇಶ್, ಸುಳ್ಯ ಶಾಸಕ ಅಂಗಾರ, ವಿಧಾನ ಪರಿಷತ್ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಕ್ಯಾ| ಗಣೇಶ್ ಕಾರ್ಣಿಕ್, ಮಾಜಿ ಸಚಿವರಾದ ಕೃಷ್ಣ ಜಿ. ಪಾಲೆಮಾರ್, ಬಿ. ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಯೋಗೀಶ ಭಟ್, ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಬಿಜೆಪಿ ನೇತಾರ ರಾಜೇಶ್ ನಾಕ್ ಉಳಿಪಾಡಿಗುತ್ತು, ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ. ಆನಂದ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್, ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ , ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸಂಜೀವ ಮಠಂದೂರು ವಂದಿಸಿದರು. ಬಿ.ದೇವದಾಸ ಶೆಟ್ಟಿ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.