News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬೌದ್ಧ ಬಿಕ್ಕುವಿನ ವೇಷದಲ್ಲಿ ಬೇಹುಗಾರಿಕೆ: ಚೀನಾ ಮಹಿಳೆಯ ಬಂಧನ

ನವದೆಹಲಿ: ಉತ್ತರ ದೆಹಲಿಯ ಟಿಬೆಟಿಯನ್ ನಿರಾಶ್ರಿತರ ಕಾಲೋನಿಯಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಶಂಕೆಯ ಮೇರೆಗೆ ಚೀನಾ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ಬೌದ್ಧ ಬಿಕ್ಕುವಿನಂತೆ ವೇಷ ಧರಿಸಿ ಟಿಬೆಟ್‌ ನಿರಾಶ್ರಿತರೊಂದಿಗೆ ವಾಸವಿದ್ದಳು ಎಂದು ಮೂಲಗಳು ತಿಳಿಸಿವೆ.

ಆಕೆಯ ಬಳಿ ಇರುವ ಗುರುತಿನ ಪತ್ರಗಳು ನೇಪಾಳದ ರಾಜಧಾನಿ ಕಠ್ಮಂಡುವಿನ ವಿಳಾಸವನ್ನು ಹೊಂದಿವೆ. ಆಕೆಯ ಹೆಸರನ್ನು ಡೋಲ್ಮಾ ಲಾಮಾ ಎಂದು ತೋರಿಸಿದೆ. ಆದರೆ ಆಕೆಯ ನಿಜವಾದ ಹೆಸರು ಕೈ ರೂವೊ ಆಗಿದ್ದು ಈಕೆ ಚೀನಾದವಳು ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್ ಬಳಿ ಪ್ರವಾಸಿಗರ ನೆಚ್ಚಿನ ತಾಣ ಟಿಬೆಟಿಯನ್ ನಿರಾಶ್ರಿತರ ಕಾಲೋನಿ ಮಜ್ನು ಕಾ ತಿಲ್ಲಾದಲ್ಲಿ ಅವಳು ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಅವಳು ಬೌದ್ಧ ಸನ್ಯಾಸಿಯ ವೇಷದಲ್ಲಿ ವಾಸಿಸುತ್ತಿದ್ದಳು, ಸಾಂಪ್ರದಾಯಿಕ  ಕೆಂಪು ಸನ್ಯಾಸಿ ನಿಲುವಂಗಿಯನ್ನು ಧರಿಸುತ್ತಿದ್ದಳು ಮತ್ತು ತಲೆಯನ್ನು ಬೋಳು ಮಾಡಿಕೊಂಡಿದ್ದಳು ಎಂದಿದ್ದಾರೆ.

ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ ಅಥವಾ ಎಫ್‌ಆರ್‌ಆರ್‌ಒ ಅವಳ ದಾಖಲೆಗಳನ್ನು ಪರಿಶೀಲಿಸಿದ್ದು, ಆಕೆ 2019 ರಲ್ಲಿ ಚೀನಾದ ಪಾಸ್‌ಪೋರ್ಟ್ ಬಳಸಿ ಭಾರತಕ್ಕೆ ಬಂದಿದ್ದಾಳೆ ಎಂಬುದು ತಿಳಿದು ಬಂದಿದೆ.

ವಿಚಾರಣೆಯ ಸಮಯದಲ್ಲಿ, ಚೀನಾದ ಕಮ್ಯುನಿಸ್ಟ್ ಪಕ್ಷದ ಕೆಲವು ನಾಯಕರು ತನ್ನನ್ನು ಕೊಲ್ಲಲು ಬಯಸಿದ್ದರು ಎಂದು ಅವಳು ಹೇಳಿಕೊಂಡಿದ್ದಾಳೆ. ಇಂಗ್ಲಿಷ್, ಮ್ಯಾಂಡರಿನ್ ಮತ್ತು ನೇಪಾಳಿ ಭಾಷೆಗಳನ್ನು ಆಕೆ ಮಾತನಾಡುತ್ತಾಳೆ.

ಆಕೆಯನ್ನು ಬಂಧಿಸಿರುವ ದೆಹಲಿ ಪೊಲೀಸ್ ವಿಶೇಷ ಘಟಕವು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top