News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 1st December 2022


×
Home About Us Advertise With s Contact Us

ಮುಂದಿನ ತಿಂಗಳು ದೇಶದ ಮೊದಲ ವಾಟರ್ ಮೆಟ್ರೋ ಯೋಜನೆಗೆ ಚಾಲನೆ

ಕೊಚ್ಚಿ: ಮುಂದಿನ ತಿಂಗಳು ಕೊಚ್ಚಿಯಲ್ಲಿ ದೇಶದ ಮೊದಲ ವಾಟರ್ ಮೆಟ್ರೋ ಯೋಜನೆಗೆ ಚಾಲನೆ ದೊರೆಯುವ ಸಾಧ್ಯತೆ ಇದೆ.

ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ಕೊಚ್ಚಿ ಮೆಟ್ರೋ ರೈಲ್ ಲಿಮಿಟೆಡ್ (KMRL) ಗಾಗಿ ನಿರ್ಮಿಸಿದ ಐದನೇ ವಾಟರ್ ಮೆಟ್ರೋ ಬೋಟ್ ಅನ್ನು ಅಕ್ಟೋಬರ್ 15ರಂದು ಹಸ್ತಾಂತರ ಮಾಡಲಾಗಿದೆ.

ಜಲ ಮೆಟ್ರೋ ಯೋಜನೆಗಾಗಿ 100 ಪ್ರಯಾಣಿಕರ ಸಾಮರ್ಥ್ಯದ ಒಟ್ಟು 23 ವಿದ್ಯುತ್ ಚಾಲಿತ ವೇಗದ ಹೈಬ್ರಿಡ್ ದೋಣಿಗಳನ್ನು CSL ನಿರ್ಮಿಸುತ್ತಿದೆ.

747 ಕೋಟಿ ರೂ.ಗಳ ವಾಟರ್ ಮೆಟ್ರೋ ಯೋಜನೆಗೆ 15 ಮಾರ್ಗಗಳನ್ನು ಗುರುತಿಸಲಾಗಿದ್ದು, 76 ಕಿಮೀ ವ್ಯಾಪ್ತಿಯ 10 ದ್ವೀಪಗಳನ್ನು ಸಂಪರ್ಕಿಸಲಾಗಿದೆ.

ಎಲ್ಲವೂ ಯೋಜಿಸಿದಂತೆ ನಡೆದರೆ, ಬಹುಶಃ ನವೆಂಬರ್ ಮೊದಲ ವಾರದಲ್ಲಿ ರಾಷ್ಟ್ರೀಯ ಮಟ್ಟದ ಅರ್ಬನ್‌ ಮೊಬಿಲಿಟಿ ಇಂಡಿಯಾ ಕಾನ್ಫರೆನ್ಸ್‌ ವೇಳೆ ಉದಾಟಿಸಲಾಗುವುದು ಎಂದು ಮೂಲಗಳು ವರದಿ ಮಾಡಿವೆ.

ವಾಟರ್ ಮೆಟ್ರೋ ಯೋಜನೆಯು ಕೊಚ್ಚಿಯ ಜಲ ಸಾರಿಗೆ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲಿದೆ ಎಂದು ನಿರೀಕ್ಷಿಸಲಾಗಿದೆ.

ಡಿಸೆಂಬರ್ ವೇಳೆಗೆ 14 ವಾಟರ್ ಮೆಟ್ರೋ ಟರ್ಮಿನಲ್‌ಗಳು ಕಾರ್ಯಾರಂಭ ಮಾಡಲು ಯೋಜಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top