News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಕ್ರಮವಾಗಿ ಪ್ರವೇಶಿಸಿದ ಪಾಕಿಸ್ಥಾನ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌ಎಫ್

ಪಂಜಾಬ್: ಸೋಮವಾರ ತಡರಾತ್ರಿ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಕಡೆಯಿಂದ ಪಂಜಾಬ್‌ನ ಅಮೃತಸರ ಸೆಕ್ಟರ್‌ನಲ್ಲಿ ಭಾರತವನ್ನು ಪ್ರವೇಶಿಸಿದ ಡ್ರೋನ್ ಅನ್ನು ಗಡಿ ಭದ್ರತಾ ಪಡೆಗಳು ಹೊಡೆದುರುಳಿಸಿದವು.

ಅಮೃತಸರದ ಛಾನಾ ಗ್ರಾಮದ ಬಳಿ ರಾತ್ರಿ 8.30ಕ್ಕೆ ಡ್ರೋನ್ ಅನ್ನು ಗಸ್ತು ಕರ್ತವ್ಯದಲ್ಲಿದ್ದ ಬಿಎಸ್‌ಎಫ್ ಪಡೆಗಳು ಗುರುತಿಸಿದವು ಮತ್ತು ತಕ್ಷಣ ಗುಂಡು ಹಾರಿಸಿ ಅದನ್ನು ಹೊಡೆದುರುಳಿಸಿದರು ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಎಸ್ಎಫ್ ಅಧಿಕಾರಿಗಳ ಪ್ರಕಾರ, ಡ್ರೋನ್‌ನೊಂದಿಗೆ 2.5 ಕೆಜಿಯ ಎರಡು ಪ್ಯಾಕೆಟ್ ನಿಷಿದ್ಧ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

ಪಾಕಿಸ್ತಾನದ ಕಡೆಯಿಂದ ಇಂತಹ ಅಕ್ರಮ ಯತ್ನಗಳನ್ನು ನಿರ್ವಹಿಸಲು ಭಾರತ-ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳ ಇನ್ಪುಟ್ ಅನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಹಂಚಿಕೊಂಡಿದೆ.

ಇದುವರೆಗೆ ಪಾಕಿಸ್ಥಾನದ 191 ಡ್ರೋನ್‌ಗಳು ಭಾರತಕ್ಕೆ ಪ್ರವೇಶಿಸಿವೆ. ಇದರಲ್ಲಿ 171 ಪಂಜಾಬ್ ಸೆಕ್ಟರ್‌ನ ಉದ್ದಕ್ಕೂ ಭಾರತ-ಪಾಕಿಸ್ತಾನ ಗಡಿಯ ಮೂಲಕ ಭಾರತದ ಭೂಪ್ರದೇಶವನ್ನು ಪ್ರವೇಶಿಸಿವೆ ಮತ್ತು 20 ಜಮ್ಮು ಸೆಕ್ಟರ್‌ನಲ್ಲಿ ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ

ಈ ವರ್ಷ ಜನವರಿ 1 ರಿಂದ ಸೆಪ್ಟೆಂಬರ್ 15 ರ ನಡುವೆ ಹೊಡೆದುರುಳಿಸಿದ ಏಳು ಡ್ರೋನ್‌ಗಳು ಪಂಜಾಬ್‌ನ ಅಮೃತಸರ, ಫಿರೋಜ್‌ಪುರ ಮತ್ತು ಅಬೋಹರ್ ಪ್ರದೇಶಗಳಲ್ಲಿ ಕಂಡು ಬಂದಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top