News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2030ರ ವೇಳೆಗೆ ಭಾರತದ 65% ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ ಪಳೆಯುಳಿಕೆ ರಹಿತ ಇಂಧನಗಳಿಂದ ಬರಲಿದೆ

ನವದೆಹಲಿ: 2030 ರ ವೇಳೆಗೆ ಭಾರತವು  ತನ್ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಶೇಕಡಾ 65 ಕ್ಕಿಂತ ಹೆಚ್ಚನ್ನು ಪಳೆಯುಳಿಕೆ ರಹಿತ ಇಂಧನಗಳಿಂದ ಪಡೆಯಲಿದೆ ಎಂದು ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್‌ಕೆ ಸಿಂಗ್  ಹೇಳಿದ್ದಾರೆ.

ಹಸಿರು ಶಕ್ತಿಯ ಕುರಿತು ಸಿಐಐ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ಪಳೆಯುಳಿಕೆಯೇತರ ಇಂಧನಗಳಿಂದ 65 ಪ್ರತಿಶತದಷ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಗುರಿಯಾಗಿಸಿಕೊಂಡಿದೆ ಆದರೆ ದೇಶವು ಉರಗಿಂತಲೂ ಹೆಚ್ಚಿನದನ್ನು ಹೊಂದಿರುತ್ತದೆ ಎಂದು ವಿವರಿಸಿದರು.

ಭಾರತವು 2030 ರ ವೇಳೆಗೆ 90 GW ಸೌರ ಉಪಕರಣಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಲಿದೆ, ಪ್ರಸ್ತುತ  ಇದು 20 GW ಇದೆ ಎಂದು ಅವರು ಹೇಳಿದರು. ಸುಮಾರು 15-20 GW ಸೌರ ಉಪಕರಣಗಳ ಉತ್ಪಾದನಾ ಸಾಮರ್ಥ್ಯವು ನಿರ್ಮಾಣ ಹಂತದಲ್ಲಿದೆ ಮತ್ತು ಉತ್ಪಾದನೆ-ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್-II (PLI-II) ಅಡಿಯಲ್ಲಿ ಭಾರತವು 40 GW ಅಂತಹ ಸೌಲಭ್ಯಗಳನ್ನು ಹೊಂದಿರುತ್ತದೆ ಎಂದು ಅವರು ಮಾಹಿತಿ ನೀಡಿದರು.

ಹೆಚ್ಚಿನ ಸಾಮರ್ಥ್ಯದ ಸೌರ ಉಪಕರಣಗಳ ತಯಾರಿಕೆಗೆ ಬದಲಾಯಿಸಿಕೊಳ್ಳುವಂತೆ ಸಚಿವರು ಉದ್ಯಮದವರಿಗೆ ಕರೆ ನೀಡಿದರು.

ದೇಶವು ಈಗಾಗಲೇ 170 GW ನವೀಕರಿಸಬಹುದಾದ ಇಂಧನವನ್ನು ಹೊಂದಿದೆ (ದೊಡ್ಡ ಜಲವಿದ್ಯುತ್ ಸೇರಿದಂತೆ), ಇನ್ನೂ 80 GW ನಿರ್ಮಾಣ ಹಂತದಲ್ಲಿದೆ ಎಂದು ಅವರು ಹೇಳಿದ್ದಾರೆ. ಭಾರತವು 2030 ರ ವೇಳೆಗೆ 500 GW ನವೀಕರಿಸಬಹುದಾದ ಇಂಧನವನ್ನು ಹೊಂದಲು ಯೋಜಿಸಿದೆ. ಉದ್ಯಮವು 25 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಸಾಮರ್ಥ್ಯದ ಬಗ್ಗೆ ಆಸಕ್ತಿಯನ್ನು ವ್ಯಕ್ತಪಡಿಸಿದೆ ಎಂದು ಅವರು ಹೇಳಿದರು. ಹಸಿರು ಹೈಡ್ರೋಜನ್ ಉತ್ಪಾದನಾ ಸಾಮರ್ಥ್ಯವು 35-40 ಮಿಲಿಯನ್ ಟನ್ ಆಗಿರಬಹುದು ಎಂದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top