News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವೈರಲ್‌ ಆಗುತ್ತಿದೆ ಲಡಾಖ್‌ ಬಾಲಕಿಯ ಕ್ರಿಕೆಟ್‌ ಆಟದ ವಿಡಿಯೋ

ನವದೆಹಲಿ: ಲಡಾಖ್‌ನ ಬಾಲಕಿಯೊಬ್ಬಳು ತನ್ನ ಶಾಲೆಯಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಇಡೀ ದೇಶದ ಗಮನ ಸೆಳೆದಿದ್ದಾಳೆ. ಈ ವಿಡಿಯೋ ಅನ್ನು ಲಡಾಖ್‌ನಲ್ಲಿರುವ ಶಾಲಾ ಶಿಕ್ಷಣ ನಿರ್ದೇಶನಾಲಯ (ಡಿಎಸ್‌ಇ) ಶುಕ್ರವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಬಾಲಕಿಯನ್ನು 6 ನೇ ತರಗತಿಯ ವಿದ್ಯಾರ್ಥಿನಿ ಮಕ್ಸೂಮಾ ಎಂದು ಗುರುತಿಸಿದೆ.

“ಮನೆಯಲ್ಲಿರುವ ನನ್ನ ತಂದೆ ಮತ್ತು ಶಾಲೆಯಲ್ಲಿ ನನ್ನ ಶಿಕ್ಷಕರು ನನ್ನನ್ನು ಕ್ರಿಕೆಟ್ ಆಡಲು ಪ್ರೋತ್ಸಾಹಿಸುತ್ತಾರೆ. ನಾನು ವಿರಾಟ್‌ ಕೊಹ್ಲಿಯಂತೆ ಕ್ರಿಕೆಟ್‌ ಆಡಲು ಪ್ರಯತ್ನಿಸುತ್ತಿದ್ದೇನೆ” ಎಂದು ಆಕೆ ಹೇಳಿದ್ದಾರೆ.

“ನಾನು ಬಾಲ್ಯದಿಂದಲೂ ಆಡುತ್ತಿದ್ದೇನೆ. ನಾನು ಇನ್ನೂ ವಿಶೇಷವಾಗಿ ‘ಹೆಲಿಕಾಪ್ಟರ್ ಶಾಟ್’ ಆಡುವುದನ್ನು ಕಲಿಯುತ್ತಿದ್ದೇನೆ. ಎರಡನೇ ರನ್ ತೆಗೆದುಕೊಂಡ ನಂತರ ನಾವು ದಣಿದಿದ್ದೇವೆ ಮತ್ತು ಮತ್ತೊಮ್ಮೆ ಓಡಬೇಕು ಅನಿಸುವುದಿಲ್ಲ. ನನ್ನ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಾನು ಅವರಂತೆ ಆಗಲು ಬಯಸುತ್ತೇನೆ, ”ಎಂದು ಆಕೆ ಹೇಳುತ್ತಾಳೆ.

ನೆಟ್ಟಿಗರು ಆಕೆಯ ಆಟವನ್ನು ಕೊಂಡಾಡಿದ್ದು ಆಕೆಯ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top