News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಈಜಿಪ್ಟ್ ಪ್ರವಾಸದಲ್ಲಿ ಜೈಶಂಕರ್:‌ ವಿದೇಶಾಂಗ ನೀತಿ ಕ್ಷೇತ್ರದ ಗಣ್ಯರ ಭೇಟಿ

ಕೈರೋ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಈಜಿಪ್ಟ್ ಪ್ರವಾಸದಲ್ಲಿದ್ದು, ಶನಿವಾರ ರಾಜಧಾನಿ ಕೈರೋದಲ್ಲಿ  ಅವರು ವಿದೇಶಾಂಗ ನೀತಿ ಕ್ಷೇತ್ರದ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಿದರು.

ಜೈಶಂಕರ್ ಅವರು ಅಕ್ಟೋಬರ್ 15 ರಿಂದ ಅಕ್ಟೋಬರ್ 16 ರವರೆಗೆ ತಮ್ಮ ಮೊದಲ ದ್ವಿಪಕ್ಷೀಯ ಭೇಟಿಗಾಗಿ ಈಜಿಪ್ಟ್‌ಗೆ ಎರಡು ದಿನಗಳ ಅಧಿಕೃತ ಪ್ರವಾಸದಲ್ಲಿದ್ದಾರೆ.

ಟ್ವಿಟ್‌ ಮಾಡಿರುವ ಅವರು, “ನನ್ನ ಕೈರೋ ಭೇಟಿಗೆ ಉತ್ತಮ ಆರಂಭ. ವಿದೇಶಾಂಗ ನೀತಿ ಕ್ಷೇತ್ರದಲ್ಲಿನ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಿದ್ದೇನೆ. ಪ್ರಾದೇಶಿಕ ಮತ್ತು ಜಾಗತಿಕ ರಾಜಕೀಯದ ಬಗ್ಗೆ ನಮ್ಮ ಸಂಬಂಧ ಮತ್ತು ಒಳನೋಟಗಳಿಗೆ ಅವರ ಬೆಂಬಲಕ್ಕಾಗಿ ಅವರಿಗೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ.

ಭೇಟಿಯ ಸಂದರ್ಭದಲ್ಲಿ ಸಚಿವ ಜೈಶಂಕರ್ ಅವರು ಈಜಿಪ್ಟ್ ವಿದೇಶಾಂಗ ಸಚಿವ ಸಮೇಹ್ ಶೌಕ್ರಿ ಅವರೊಂದಿಗೆ ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವರು ವಿದ್ಯಾರ್ಥಿಗಳು ಸೇರಿದಂತೆ ಈಜಿಪ್ಟ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಈಜಿಪ್ಟ್ ಮತ್ತು ಭಾರತೀಯ ವ್ಯಾಪಾರ ಸಮುದಾಯದ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪತ್ರಿಕಾ ಹೇಳಿಕೆಯಲ್ಲಿ,  ಭಾರತ ಮತ್ತು ಈಜಿಪ್ಟ್ ಸಾಂಪ್ರದಾಯಿಕವಾಗಿ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಆಧಾರದ ಮೇಲೆ  ಸೌಹಾರ್ದ ಸಂಬಂಧವನ್ನು ಅನುಭವಿಸುತ್ತವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಎರಡೂ ದೇಶಗಳು ಈ ವರ್ಷ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75 ನೇ ವರ್ಷವನ್ನು ಆಚರಿಸುತ್ತಿವೆ. 2022-23ರಲ್ಲಿ ಭಾರತದ G-20 ಅಧ್ಯಕ್ಷರ ಅವಧಿಯಲ್ಲಿ ಈಜಿಪ್ಟ್ ಅನ್ನು ‘ಅತಿಥಿ ದೇಶ’ ಎಂದು ಆಹ್ವಾನಿಸಲಾಗಿದೆ.

ಈಜಿಪ್ಟ್‌ನಲ್ಲಿ ಭಾರತೀಯ ಹೂಡಿಕೆ USD 3.15 ಬಿಲಿಯನ್ ಮೀರಿದೆ. ಉತ್ಪಾದನೆ, ರಾಸಾಯನಿಕಗಳು, ಶಕ್ತಿ, ಮೂಲಸೌಕರ್ಯ, ಚಿಲ್ಲರೆ ವ್ಯಾಪಾರ ಮುಂತಾದ ಕ್ಷೇತ್ರಗಳ ವ್ಯಾಪ್ತಿಯಲ್ಲಿ 50 ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ಈಜಿಪ್ಟ್‌ನಲ್ಲಿ ಸಕ್ರಿಯವಾಗಿ ಪ್ರಸ್ತುತವಾಗಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top