News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

10 ವರ್ಷ ಹಳೆಯ ಆಧಾರ್‌ ಅಪ್‌ಡೇಟ್‌ ಮಾಡಲು UIDAI ಸೂಚನೆ

ನವದೆಹಲಿ: 10 ವರ್ಷಗಳ ಹಿಂದೆ ಆಧಾರ್‌ ಪಡೆದಿರುವ ಮತ್ತು ನಂತರದ ವರ್ಷಗಳಲ್ಲಿ ಅದರ ವಿವರಗಳನ್ನು ನವೀಕರಿಸದವರು ತಮ್ಮ ಗುರುತಿನ ಮತ್ತು ನಿವಾಸ ಪುರಾವೆಯ ದಾಖಲೆಗಳನ್ನು ಹೊಸದಾಗಿ ಸಲ್ಲಿಸಬೇಕು ಎಂದು ಯುಐಡಿಎಐ ಹೇಳಿದೆ.

ಈ  ಬಗ್ಗೆ ಹೇಳಿಕೆ ನೀಡಿರುವ ಆಧಾರ್ ಸಂಖ್ಯೆಗಳನ್ನು ನೀಡುವ ಸರ್ಕಾರಿ ಸಂಸ್ಥೆ ಯುಐಡಿಎಐ, ಆಧಾರ್ ಅಪ್‌ಡೇಟ್ ಅನ್ನು ಆನ್‌ಲೈನ್‌ನಲ್ಲಿ ಮತ್ತು ಆಧಾರ್ ಕೇಂದ್ರಗಳಲ್ಲಿ ಮಾಡಬಹುದು ಎಂದು ಹೇಳಿದೆ.

10 ವರ್ಷಗಳ ಹಿಂದೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಪಡೆದವರು ಮತ್ತು ಇದುವರೆಗೆ ದಾಖಲೆಗಳನ್ನು ನವೀಕರಣ ಮಾಡದವರು  ಕೂಡಲೇ ತಮ್ಮ ದಾಖಲೆಗಳನ್ನು ಅಪ್‌ಡೇಟ್‌ ಮಾಡಬೇಕು ಎಂದಿದೆ.

ಈ ನವೀಕರಣವು ಕಡ್ಡಾಯವಾಗಿದೆಯೇ ಎಂಬುದನ್ನು ಯುಐಡಿಎಐ ಸ್ಪಷ್ಟಪಡಿಸಿಲ್ಲ.

“10 ವರ್ಷಗಳ ಹಿಂದೆ ತಮ್ಮ ಆಧಾರ್ ಅನ್ನು ಪಡೆದ ಯಾವುದೇ ವ್ಯಕ್ತಿ ಮತ್ತು ನಂತರದ ಯಾವುದೇ ವರ್ಷಗಳಲ್ಲಿ ಮಾಹಿತಿಯನ್ನು ನವೀಕರಿಸದಿದ್ದಲ್ಲಿ ದಾಖಲೆಗಳನ್ನು ನವೀಕರಿಸಲು ವಿನಂತಿಸಲಾಗುತ್ತಿದೆ” ಎಂದು ಅದು ಹೇಳಿದೆ.

ಅಗತ್ಯ ಶುಲ್ಕವನ್ನು ಪಾವತಿಸಿದ ನಂತರ ಗುರುತಿನ ದಾಖಲೆಗಳು ಮತ್ತು ನಿವಾಸದ ಪುರಾವೆಗಳ ನವೀಕರಣವನ್ನು ಮಾಡಲಾಗುತ್ತದೆ.

“ಈ ಸೌಲಭ್ಯವನ್ನು ನನ್ನ ಆಧಾರ್ ಪೋರ್ಟಲ್‌ನಲ್ಲಿ ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಪಡೆಯಬಹುದು” ಎಂದು ಅದು ಹೇಳಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top