ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರು ರಾಷ್ಟ್ರೀಯ ಶಿಷ್ಯವೃತ್ತಿ ಯೋಜನೆಯ ವೆಬ್ ಪೋರ್ಟಲ್ಗೆ ಚಾಲನೆ ನೀಡಿದ್ದಾರೆ. ಪದವೀಧರರಿಗೆ, ಡಿಪ್ಲೋಮ ಮಾಡಿದವರಿಗೆ, 10+2 ಪ್ರಮಾಣ ಪತ್ರ ಪಡೆದವರಿಗೆ ಪ್ರ್ಯಾಕ್ಟಿಕಲ್ ತರಬೇತಿ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಯ ವೆಬ್ ಪೋರ್ಟಲ್ ಬಿಡುಗಡೆ ಮಾಡಿ ಮಾತನಾಡಿದ ಇರಾನಿ, ‘ಈ ಪೋರ್ಟಲ್ ಈ-ಗರ್ವನೆನ್ಸ್ ಮೂಲಕ ಪಾರದರ್ಶಕ ಆಡಳಿತ ತರುವ ನಿಟ್ಟಿನಲ್ಲಿ ದೇಶದಾದ್ಯಂತ ಇರುವ ವಿದ್ಯಾರ್ಥಿಗಳು, ಸಂಸ್ಥೆ, ತಾಂತ್ರಿಕ ಸಂಸ್ಥೆ ಎಲ್ಲಾ ಸ್ಟೇಕ್ ಹೋಲ್ಡರ್ಸ್ಗಳನ್ನು ಒಟ್ಟುಗೂಡಿಸುತ್ತದೆ’ ಎಂದರು.
‘ಸಶಕ್ತ್ ಯುವ, ಸಮರ್ಥ್ ಭಾರತ್’ ಎಂಬ ಘೋಷ ವಾಕ್ಯವನ್ನೂ ಈ ಪೋರ್ಟಲ್ಗೆ ಇಡಲಾಗಿದೆ, ಮರಾಠಿ, ಬಂಗಾಳಿ, ತಮಿಳು ಮತ್ತು ಹಿಂದಿಯಲ್ಲಿ ಈ ಪೋರ್ಟಲ್ ಲಭ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.