ನವದೆಹಲಿ: ಭಾರತ ನಿರ್ಮಿತ ನಾಲ್ಕು ಕೆಮ್ಮು ಮತ್ತು ಶೀತದ ಸಿರಪ್‌ಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ ನಂತರ, ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನ ಕೆಮ್ಮು ಸಿರಪ್‌ಗಳ ಉತ್ಪಾದನೆಯನ್ನು ಹರಿಯಾಣ ಸರ್ಕಾರ ನಿಲ್ಲಿಸಿದೆ.
ಈ ಕಂಪನಿಯ ನಾಲ್ಕು ಕೆಮ್ಮು ಮತ್ತು ಶೀತದ ಸಿರಪ್‌ಗಳು ಗ್ಯಾಂಬಿಯಾದಲ್ಲಿ 66 ಮಕ್ಕಳು ಸಾವಿಗೆ ಸಂಬಂಧಿಸಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.
ಹರಿಯಾಣ ಗೃಹ ಮತ್ತು ಆರೋಗ್ಯ ಸಚಿವ ಅನಿಲ್ ವಿಜ್ ಅವರು ಈ ಬಗ್ಗೆ ಮಾತನಾಡಿ, “ಕೇಂದ್ರ ಮತ್ತು ಹರಿಯಾಣ ರಾಜ್ಯ ಔಷಧ ಇಲಾಖೆಗಳು ಜಂಟಿ ತಪಾಸಣೆ ನಡೆಸಿದ ನಂತರ, ಸುಮಾರು 12 ನ್ಯೂನತೆಗಳು ಕಂಡುಬಂದಿವೆ, ಇದನ್ನು ಗಮನದಲ್ಲಿಟ್ಟುಕೊಂಡು, ಒಟ್ಟು ಉತ್ಪಾದನೆಯನ್ನು ನಿಲ್ಲಿಸಲು ನಿರ್ಧರಿಸಲಾಗಿದೆ ಮತ್ತು ಈ ಬಗ್ಗೆ ಸೂಚನೆ ನೀಡಲಾಗಿದೆ” ಎಂದಿದ್ದಾರೆ.
ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಕೆಮ್ಮು ಸಿರಪ್‌ಗಳ ಉತ್ಪಾದನೆಯನ್ನು ಸರ್ಕಾರ ನಿಲ್ಲಿಸಿದೆ ಎಂದಿದ್ದಾರೆ.
Haryana govt stops the production of cough syrups by Maiden Pharmaceuticals Ltd
Samples of 3 drugs mentioned by WHO of Sonipat's pharmaceuticals company were sent to Central Drug Lab in Kolkata. The reports are not in yet, action will be taken after that: Haryana HM Anil Vij https://t.co/OXdRxsqc5U pic.twitter.com/YO1SuhAlor
— ANI (@ANI) October 12, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.