News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶಿವಸೇನೆಯ ಶಿಂಧೆ ಬಣಕ್ಕೆ ʼಕತ್ತಿ ಮತ್ತು ಗುರಾಣಿʼ ಚಿಹ್ನೆ ನೀಡಿದ ಇಸಿ

ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣದ ಶಿವಸೇನೆಗೆ ಚುನಾವಣಾ ಯೋಗವು ಕತ್ತಿ ಮತ್ತು ಗುರಾಣಿಯ ಚಿಹ್ನೆಯನ್ನು ನೀಡಿದೆ.

ಶಿವಸೇನೆಯ ಏಕನಾಥ್ ಶಿಂಧೆ ಬಣವು ತನ್ನ ಚುನಾವಣಾ ಚಿಹ್ನೆಯ ಆಯ್ಕೆಯಾಗಿ ‘ಹೊಳೆಯುತ್ತಿರುವ ಸೂರ್ಯ’, ‘ಗುರಾಣಿ ಮತ್ತು ಕತ್ತಿ’ ಮತ್ತು ‘ಅಶ್ವಥ ಮರ’ವನ್ನು ಚುನಾವಣಾ ಚಿಹ್ನೆಯಾಗಿ ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು. ಅದರಲ್ಲಿ ಅಂತಿಮವಾಗಿ ಗುರಾಣಿ ಮತ್ತು ಕತ್ತಿ ಆಯ್ಕೆಯಾಗಿದೆ.

ಶಿವಸೇನೆಗೆ 1989 ರಲ್ಲಿ ಶಾಶ್ವತ ಚುನಾವಣಾ ಚಿಹ್ನೆ  ‘ಬಿಲ್ಲು ಮತ್ತು ಬಾಣ’ ನೀಡಲಾಯಿತು, ಅದರ ಮೇಲೆಯೇ ಅದು  ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸಿತ್ತು.

ಆದರೆ, ಜೂನ್‌ನಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಗುಂಪಿನ ಬಂಡಾಯದ ನಂತರ, ಚುನಾವಣಾ ಆಯೋಗವು ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಸ್ಥಗಿತಗೊಳಿಸಿದೆ.

ಚುನಾವಣಾ ಸಮಿತಿಯು ಠಾಕ್ರೆ ಮತ್ತು ಶಿಂಧೆ ಬಣಗಳಿಗೆ ಹೊಸ ಹೆಸರುಗಳನ್ನು ಮತ್ತು ಚಿಹ್ನೆಯನ್ನು ನೀಡಿದೆ. ಠಾಕ್ರೆಗೆ ‘ಪ್ರಜ್ವಲಿಸುವ ಜ್ಯೋತಿ’ ಚಿಹ್ನೆಯನ್ನು ನೀಡಿದೆ,  ಶಿಂಧೆ ಬಣಕ್ಕೆ ಕತ್ತಿ ಮತ್ತು ಗುರಾಣಿಯನ್ನು ಚಿಹ್ನೆಯಾಗಿ ನೀಡಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top