News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಂಸ್ಕೃತ ಕ್ರಿಕೆಟ್ ಕಾಮೆಂಟರಿಗೆ ಮನಸೋತ ನೆಟ್ಟಿಗರು

ನವದೆಹಲಿ: ಕ್ರಿಕೆಟ್ ಪ್ರೇಮಿಗಳು ಆಟವನ್ನು ನೋಡುವುದಷ್ಟೇ ಅಲ್ಲ ಕೇಳುತ್ತಾರೆ ಕೂಡ. ಕಾಮೆಂಟರಿ ಇಲ್ಲದೆ ಕ್ರಿಕೆಟ್ ನೀರಸವಾಗುತ್ತದೆ. ಅದೇ ಆಕರ್ಷಕ‌ ಧ್ವನಿಯಿಂದ ಹೊರಹೊಮ್ಮುವ ಕಾಮೆಂಟರಿ ಎಂಥವರನ್ನೂ ಕ್ರಿಕೆಟ್‌ನತ್ತ‌ ಆಕರ್ಷಿಸಿ ಬಿಡುತ್ತದೆ.

ನಾವು ಸಹಜವಾಗಿ ಕ್ರಿಕೆಟ್ ಕಾಮೆಂಟರಿಯನ್ನು ಇಂಗ್ಲಿಷ್, ಹಿಂದಿ, ಕನ್ನಡ ಮುಂತಾದ ಆಡು ಭಾಷೆಗಳಲ್ಲಿ ಕೇಳಿರುತ್ತೇವೆ. ಅದೇ ಕ್ರಿಕೆಟ್ ಕಾಮೆಂಟರಿ ಸಂಸ್ಕೃತದಲ್ಲಿ ಇದ್ದರೆ ಹೇಗಿರಬಹುದು? ಅದ್ಭುತ ಎನಿಸುತ್ತದೆ. ಹೌದು ಸಂಸ್ಕೃತ ಕ್ರಿಕೆಟ್ ಕಾಮೆಂಟರಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಗಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಹುಡುಗನೊಬ್ಬ ಸಂಸ್ಕೃತದಲ್ಲಿ ಕ್ರಿಕೆಟ್ ಕಾಮೆಂಟರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಬಾಲಕರ ಗುಂಪೊಂದು ಕ್ರಿಕೆಟ್ ಆಡುತ್ತಿದ್ದು, ಹಿನ್ನೆಲೆಯಲ್ಲಿ ಸಂಸ್ಕೃತ ಕಾಮೆಂಟರಿ ಕೇಳಿ ಬರುತ್ತದೆ.‌ ಬಾಲಕರು ಸಂಸ್ಕೃತದಲ್ಲಿ ಪರಸ್ಪರ ಮಾತನಾಡುತ್ತಿರುವುದನ್ನು ನಾವು ಕಾಣಬಹುದು. ಸಂಸ್ಕೃತ ಕಾಮೆಂಟರಿಯ ಪರಿಕಲ್ಪನೆ ಮತ್ತು ಆತನ ನಿರರ್ಗಳತೆ ನೆಟ್ಟಿಗರನ್ನು ಆಶ್ಚರ್ಯಚಕಿತಗೊಳಿಸಿದೆ.

ಲಕ್ಷ್ಮಿ ನಾರಾಯಣ ಬಿ ಎಸ್ ಎಂಬ ಹೆಸರಿನ ಟ್ವಿಟರ್ ಬಳಕೆದಾರರು “ಸಂಸ್ಕೃತ ಮತ್ತು ಕ್ರಿಕೆಟ್” ಎಂಬ ಒಕ್ಕಣೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಈ ಅದ್ಭುತ ದೃಶ್ಯ ಇಂಟರ್ನೆಟ್ ಬಳಕೆದಾರರನ್ನು ಬೆರಗುಗೊಳಿಸಿದೆ. “ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಈ ಸಂಸ್ಕೃತ ಕ್ರಿಕೆಟ್ ಕಾಮೆಂಟರಿ ಬೇಕು” ಎಂದು ಕೆಲವರು ಬೇಡಿಕೆಯಿಟ್ಟಿದ್ದಾರೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top