ನವದೆಹಲಿ: ದಕ್ಷಿಣ ಆಫ್ರಿಕಾದ ಕಾಡೊಂದರ ಗುಹೆಯಲ್ಲಿ ಮಾನವ ಜಾತಿಯ ಪ್ರಾಣಿಯೊಂದು ಪತ್ತೆಯಾದ ಬಗ್ಗೆ ವರದಿಯಾಗಿದೆ.
ವಿಜ್ಞಾನಿಗಳು ಗುಹೆಯಲ್ಲಿ ಭಾಗಶಃ 15 ಅಸ್ತಿಪಂಜರಗಳನ್ನು ಪತ್ತೆ ಹಚ್ಚಿದ್ದು, ಇದು ಪ್ರಥಮ ಮಾನವ ವಿಕಸನದ ಕುರಿತು ಬೆಳಕು ಬೀರಿದಂತಾಗಿದೆ ಎಂದು ಹೇಳಿದ್ದಾರೆ. ವಿಜ್ಞಾನಿಗಳು ಈ ಪ್ರಾಣಿಗೆ ಹೋಮೋ ನಲೇದಿ ಎಂದು ಹೆಸರಿಸಿದ್ದಾರೆ. ಇದು ಮಾನವ ಸಂಕುಲದ ಮೊದಲ ಜೀವಿಯಾಗಿದ್ದು, ಸುಮಾರು 3 ಮಿಲಿಯನ್ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ಜೀವಿಸುತ್ತಿರಬಹುದೆಂದು ನಂಬಲಾಗಿದೆ.
ಇವುಗಳ ಅಸ್ತಿಪಂಜರಗಳು ವಿವಿಧ ವಯಸ್ಸಿನ ಹೆಣ್ಣು ಮತ್ತು ಗಂಡು ಜೀವಗಳನ್ನು ಹೊಂದಿದೆ. ಇವುಗಳ ಮೂಳೆಗಳ ಮಾಪನವು ಈ ಜೀವಿಗಳು ಪ್ರಾಚೀನ ಕೋತಿ ಮತ್ತು ಮಾನವ ಜಾತಿಯ ಮಿಶ್ರಣವನ್ನು ಹೊಂದಿರುವ ಸಂಕೇತವನ್ನು ಬಿಂಬಿಸಿದೆ. ಇದರ ಎದೆಯ ಭಾಗ, ಹಲ್ಲುಗಳು ಹಾಗೂ ಮೆದುಳು ಗೋರಿಲ್ಲಾದಂತೆ ಸಣ್ಣದಾಗಿದ್ದು, ಕೈ-ಕಾಲುಗಳು ಮಾನವನನ್ನು ಹೋಲುತ್ತದೆ. ಆದರೆ ಅದರ ಬೆರಳುಗಳು ಕೋತಿಗಳ ಬೆರಳುಗಳಂತೆ ಮೊಂಡಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.