ಇಸ್ಲಾಮಾಬಾದ್: ಸೌದಿ ಅರೇಬಿಯಾ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಗಳ (ಐಎಂಎಫ್) ಬೆಂಬಲದ ಹೊರತಾಗಿಯೂ, ಪಾಕಿಸ್ಥಾನ ಹಣಕಾಸಿನ ಕೊರತೆಯಿಂದ ತೀವ್ರ ಆರ್ಥಿಕ ಕುಸಿತವನ್ನು ಎದುರಿಸುತ್ತಿದೆ. ರಾಜಕೀಯ ಅಸ್ಥಿರತೆ, ಹದಗೆಡುತ್ತಿರುವ ವ್ಯಾಪಾರ ವಾತಾವರಣ ಮತ್ತು ಆರ್ಥಿಕತೆಯ ದುರುಪಯೋಗವು ದೇಶವನ್ನು ಆರ್ಥಿಕ ಅಪಾಯಗಳಿಗೆ ಮತ್ತು ರಾಜಕೀಯ ಅನಿಶ್ಚಿತತೆಗೆ ಒಡ್ಡುತ್ತಿದೆ ಎಂದು ಏಷ್ಯನ್ ಲೈಟ್ ಇಂಟರ್ನ್ಯಾಶನಲ್ ವರದಿ ಮಾಡಿದೆ.
ಪಾಕಿಸ್ಥಾನಕ್ಕೆ ಆಗಸ್ಟ್ 29 ರಂದು, ಅಂತರರಾಷ್ಟ್ರೀಯ ಹಣಕಾಸು ನಿಧಿ USD 1.1 ಬಿಲಿಯನ್ ನೆರವು ನೀಡಲು ಅನುವು ನೀಡಿತು. ಆದರೆ ಇತ್ತೀಚಿನ ಪ್ರವಾಹಗಳು ಮತ್ತು ಭಾರೀ ಮಾನ್ಸೂನ್ಗಳು ಆರ್ಥಿಕ ಬಿಕ್ಕಟ್ಟಿನ ತ್ವರಿತ ಪುನಃಶ್ಚೇತನದ ಭರವಸೆಯನ್ನು ಕುಗ್ಗಿಸಿವೆ. ನೈಸರ್ಗಿಕ ವಿಕೋಪದಿಂದ ಅಂದಾಜು ನಷ್ಟವು USD 18 ಬಿಲಿಯನ್ ವ್ಯಾಪ್ತಿಯಲ್ಲಿಇದೆ ಎಂದು ವರದಿಗಳು ತಿಳಿಸಿವೆ.
ಕನಿಷ್ಠ 18,000 ಚದರ ಕಿಲೋಮೀಟರ್ ಕೃಷಿ ಭೂಮಿ ನಾಶವಾಗಿರುವುದರಿಂದ ಪಾಕಿಸ್ತಾನದ ಕೃಷಿ ಕ್ಷೇತ್ರವು ಅತ್ಯಂತ ಕೆಟ್ಟ ಹೊಡೆತವನ್ನು ಎದುರಿಸುತ್ತಿದೆ. ಕೃಷಿ ಬೆಳವಣಿಗೆಯು ಶೂನ್ಯವಾಗಿ ಉಳಿಯಬಹುದು ಅಥವಾ ಪ್ರಸಕ್ತ ಹಣಕಾಸು ವರ್ಷ 2022-23 ಕ್ಕೆ 3.9 ಶೇಕಡಾ ಗುರಿ ತಲುಪಲು ವಿಫಲವಾಗಬಹುದು ಎನ್ನಲಾಗಿದೆ.
ಪಾಕಿಸ್ತಾನದ ಸುಮಾರು 80 ಜಿಲ್ಲೆಗಳು ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಿವೆ. ಮುಖ್ಯ ಹೆದ್ದಾರಿಯಲ್ಲಿ ಸಾವಿರಾರು ಜನರು ಡೇರೆಗಳಲ್ಲಿ ನೆಲೆಸಿದ್ದಾರೆ ಅಥವಾ ಆಶ್ರಯಕ್ಕಾಗಿ ಕಾಯುತ್ತಿದ್ದಾರೆ. ಹೆದ್ದಾರಿಯ ಎರಡೂ ಬದಿಯು ಮೈಲುಗಟ್ಟಲೆ ಪ್ರವಾಹದ ನೀರಿನಿಂದ ಜಲಾವೃತಗೊಂಡಿರುವುದನ್ನು ಕಾಣಬಹುದು.
ಹೆಚ್ಚಿದ ಆರ್ಥಿಕ ನಷ್ಟಗಳು ಮತ್ತು ಕಡಿಮೆಯಾದ ಜಿಡಿಪಿ ಬೆಳವಣಿಗೆಯ ಹಿನ್ನೆಲೆಯಲ್ಲಿ, ತಲಾ ಆದಾಯವು ನಿಧಾನಗೊಳ್ಳುವ ನಿರೀಕ್ಷೆಯಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರವು ಜಿಡಿಪಿ ಬೆಳವಣಿಗೆ ದರವನ್ನು ಶೇ 5 ರಷ್ಟು ನಿರೀಕ್ಷಿಸಿತ್ತು.
ಇದಲ್ಲದೆ, ಬಡತನ ಮತ್ತು ನಿರುದ್ಯೋಗವು 21.9 ಪ್ರತಿಶತದಿಂದ 36 ಪ್ರತಿಶತಕ್ಕೆ ಹೆಚ್ಚಾಗಲಿದೆ. ಪಾಕಿಸ್ತಾನ ಸರ್ಕಾರವು ಅಂದಾಜಿಸಿದಂತೆ 118 ಜಿಲ್ಲೆಗಳಲ್ಲಿ ಪ್ರವಾಹದ ನಂತರ ಸುಮಾರು 37 ಪ್ರತಿಶತದಷ್ಟು ಜನಸಂಖ್ಯೆಯು ಬಡತನದಿಂದ ಬಳಲುತ್ತಿದೆ.
ಇತ್ತೀಚೆಗೆ ಪಾಕಿಸ್ಥಾನಕ್ಕೆ ಭೇಟಿ ನೀಡಿದ್ದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು, 33 ದಶಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದ ದುರಂತದ ಪ್ರವಾಹದ ಹಿನ್ನೆಲೆಯಲ್ಲಿ ಪರಿಹಾರ, ಚೇತರಿಕೆ ಮತ್ತು ಪುನರ್ವಸತಿಗಾಗಿ ಪಾಕಿಸ್ತಾನಕ್ಕೆ ಬೃಹತ್ ಹಣಕಾಸಿನ ನೆರವು ಅಗತ್ಯವಿದೆ ಎಂದು ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.