ನವದೆಹಲಿ: ಭಾರತವು ಉಕ್ರೇನ್ಗೆ ಅಗತ್ಯ ಔಷಧಗಳು ಮತ್ತು ಉಪಕರಣಗಳನ್ನು ಒಳಗೊಂಡಿರುವ ಮಾನವೀಯ ನೆರವಿನ 12 ನೇ ರವಾನೆಯನ್ನು ಹಸ್ತಾಂತರಿಸಿದೆ. ಈ ಮಾನವೀಯ ನೆರವು ರಷ್ಯಾದೊಂದಿಗಿನ ಸಂಘರ್ಷದಿಂದಾಗಿ ಉಕ್ರೇನ್ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ತಗ್ಗಿಸಲು ಸಹಾಯ ಮಾಡುವ ನಿರಂತರ ಪ್ರಯತ್ನದ ಭಾಗವಾಗಿದೆ.
ಹಸ್ತಾಂತರದ ಚಿತ್ರವನ್ನು ಕೈವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮೂಲಕ ಹಂಚಿಕೊಂಡಿದೆ.
ರಾಯಭಾರಿ ಹರ್ಷ್ ಕುಮಾರ್ ಜೈನ್ ಅವರು ಟ್ವಿಟ್ ಮಾಡಿ, “ಉಕ್ರೇನ್ನ ಜನರಿಗೆ ಅಗತ್ಯವಾದ ಔಷಧಿಗಳು ಮತ್ತು ಉಪಕರಣಗಳನ್ನು ಒಳಗೊಂಡಿರುವ ಭಾರತದ ಮಾನವೀಯ ನೆರವನ್ನು ಉಕ್ರೇನ್ನ ಉಪ ಆರೋಗ್ಯ ಸಚಿವ ಒಲೆಕ್ಸಿ ಐರೆಮೆಂಕೊ ಅವರಿಗೆ ಹಸ್ತಾಂತರಿಸಲಾಯಿತು” ಎಂದು ಹೇಳಿದ್ದಾರೆ.
ಭಾರತವು ಮಾರ್ಚ್ 1 ರಂದು ಪೋಲೆಂಡ್ ಮೂಲಕ ಉಕ್ರೇನ್ಗೆ ಔಷಧಿಗಳು ಮತ್ತು ಇತರ ಪರಿಹಾರ ಸಾಮಗ್ರಿಗಳನ್ನು ಒಳಗೊಂಡಿರುವ ಮಾನವೀಯ ನೆರವಿನ ಮೊದಲ ರವಾನೆಯನ್ನು ಕಳುಹಿಸಿಕೊಟ್ಟಿತ್ತು.
Amb. Harsh Kumar Jain handed over 12th consignment of humanitarian aid from India meant for people of Ukraine comprising essential medicines and equipment to H. E. Mr. Oleksii Iaremenko, Dy Minister of Health of Ukraine.@MEAIndia @MFA_Ukraine @PTI_News @DDNewslive @DDNational pic.twitter.com/X2NVocHbVs
— India in Ukraine (@IndiainUkraine) September 12, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.