ಗ್ರೇಟರ್ ನೋಯ್ಡಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತದ ಡೈರಿ ಕ್ಷೇತ್ರದಲ್ಲಿ ಮಹಿಳಾ ಉದ್ಯೋಗಿಗಳ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಭಾರತದ ಡೈರಿ ವಲಯದಲ್ಲಿ ಮಹಿಳೆಯರು ಶೇಕಡಾ 70 ರಷ್ಟು ಉದ್ಯೋಗಿಗಳನ್ನು ಪ್ರತಿನಿಧಿಸುತ್ತಾರೆ ಮತ್ತು ಡೈರಿ ಸಹಕಾರಿಗಳಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮಹಿಳಾ ಸದಸ್ಯರಿದ್ದಾರೆ ಎಂದು ಹೇಳಿದ್ದಾರೆ.
“ಭಾರತದ ಡೈರಿ ಕ್ಷೇತ್ರದ ನಿಜವಾದ ನಾಯಕರು ಮಹಿಳೆಯರು. 2014 ರಲ್ಲಿ ಭಾರತವು 146 ಮಿಲಿಯನ್ ಟನ್ ಹಾಲು ಉತ್ಪಾದಿಸಿದೆ. ಈಗ ಅದು 210 ಮಿಲಿಯನ್ ಟನ್ಗಳಿಗೆ ಏರಿಕೆಯಾಗಿದೆ. ಅಂದರೆ ಸುಮಾರು ಶೇಕಡ 44ರಷ್ಟು ಹೆಚ್ಚಳವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೋದಿ ಇಂದು ಇಂಟರ್ನ್ಯಾಷನಲ್ ಡೈರಿ ಫೆಡರೇಶನ್ ವರ್ಲ್ಡ್ ಡೈರಿ ಶೃಂಗಸಭೆ (ಐಡಿಎಫ್ ಡಬ್ಲ್ಯುಡಿಎಸ್) 2022 ಅನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಕಂಡ ಡಿಜಿಟಲ್ ಕ್ರಾಂತಿಯು ಹೈನುಗಾರಿಕೆ ಕ್ಷೇತ್ರವನ್ನೂ ತಲುಪಿದೆ ಎಂಬುದನ್ನು ಮೋದಿ ಎತ್ತಿ ತೋರಿಸಿದರು. “ಭಾರತದ ಡೈರಿ ಕ್ಷೇತ್ರವು ಸಾಮೂಹಿಕ ಉತ್ಪಾದನೆಗಿಂತ ಹೆಚ್ಚಾಗಿ ಜನಸಾಮಾನ್ಯರಿಂದ ಉತ್ಪಾದನೆಗೆ ಗುರುತಿಸಲ್ಪಟ್ಟಿದೆ. ಇಂದು 8 ಕೋಟಿ ಕುಟುಂಬಗಳು ಹೈನುಗಾರಿಕೆ ಕ್ಷೇತ್ರದಿಂದ ಉದ್ಯೋಗ ಪಡೆಯುತ್ತಿದ್ದಾರೆ. ಸಣ್ಣ ಪ್ರಮಾಣದ ಡೈರಿ ರೈತರ ಸಾಮೂಹಿಕ ಪ್ರಯತ್ನದಿಂದಾಗಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಡೈರಿ ಉತ್ಪನ್ನಗಳ ಉತ್ಪಾದಕ ರಾಷ್ಟ್ರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಜಾನುವಾರುಗಳಲ್ಲಿ ಲಂಪಿ ಸ್ಕಿನ್ ಡಿಸೀಸ್ ಅನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯಗಳು ಪ್ರಯತ್ನಗಳನ್ನು ಮಾಡುತ್ತಿವೆ. ಅನೇಕ ರಾಜ್ಯಗಳು ಜಾನುವಾರುಗಳಲ್ಲಿ ಲಂಪಿ ಸ್ಕಿನ್ ಡಿಸೀಸ್ (ಎಲ್ಎಸ್ಡಿ) ಯೊಂದಿಗೆ ಹೋರಾಡುತ್ತಿವೆ ಮತ್ತು ಈ ರೋಗವು ಡೈರಿ ವಲಯಕ್ಕೆ ಕಳವಳಕಾರಿಯಾಗಿದೆ ಎಂದಿದ್ದಾರೆ.
“ನಮ್ಮ ವಿಜ್ಞಾನಿಗಳು ಲಂಪಿ ಸ್ಕಿನ್ ಡಿಸೀಸ್ಗೆ ಸ್ಥಳೀಯ ಲಸಿಕೆಯನ್ನು ಸಹ ಸಿದ್ಧಪಡಿಸಿದ್ದಾರೆ” ಎಂದಿದ್ದಾರೆ.
Women are the real leaders of India's dairy sector… In 2014, India produced 146 million tonnes of milk. Now it has increased to 210 million tonnes. That means an increase of about 44 percent: PM Narendra Modi pic.twitter.com/FmI7QQDYM7
— ANI (@ANI) September 12, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.