ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 8ರಂದು ನವೀಕರಿಸಿದ ಸೆಂಟ್ರಲ್ ವಿಸ್ಟಾ ಅವೆನ್ಯೂ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇಂಡಿಯಾ ಗೇಟ್ ಕ್ಯಾನೋಪಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ಸ್ಥಾಪನೆಯಾಗಲಿದೆ.
ಸೆಂಟ್ರಲ್ ವಿಸ್ಟಾ ಅವೇನ್ಯೂಗೆ 2021ರ ಫೆಬ್ರವರಿ 4ರಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರಿದೀಪ್ ಸಿಂಗ್ ಪುರಿಯವರು ಭೂಮಿ ಪೂಜೆ ನೆರವೇರಿಸಿದ್ದರು.
ಸೆಂಟ್ರಲ್ ವಿಸ್ಟಾ ಅವೇನ್ಯೂ 3 ಕಿ.ಮೀ ಉದ್ದದ ಸ್ಟ್ರೆಚ್ ಆಗಿದ್ದು, ಇದು ಇಂಡಿಯಾ ಗೇಟ್ ನ ಉತ್ತರದಿಂದ ದಕ್ಷಿಣ ಬ್ಲಾಕ್ ವರೆಗೆ ಇದೆ. ಇದು ರಾಜಪಥ, ಅದಕ್ಕೆ ತಾಕಿಕೊಂಡಿರುವ ಲಾನ್ ಗಳು, ಅಂಡರ್ ಪಾಸ್, ಮರಗಳು ವಿಜಯ್ ಚೌಕ್ ಮತ್ತು ಇಂಡಿಯ ಗೇಟ್ ಪ್ಲಾಜಾವನ್ನು ಒಳಪಡಲಿದೆ.
ನವೀಕರಿಸಿದ ಸೆಂಟ್ರಲ್ ವಿಸ್ಟಾ ಅವೆನ್ಯೂ ಜನಪತ್ ನಲ್ಲಿ ಅಂಡರ್ ಪಾಸ್ ಗಳನ್ನು ಒದಗಿಸುವುದರೊಂದಿಗೆ ಹೆಚ್ಚು ಪಾದಚಾರಿ ಸ್ನೇಹ ಆಗಿದೆ. 12 ಸೂಕ್ತ ಸ್ಥಳದಲ್ಲಿ ಪಾರ್ಕಿಂಗ್, ಸಾರ್ವಜನಿಕ ಸೌಕರ್ಯಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.
Delhi's Central Vista Avenue wears an all-new look as it is set to open for the people pic.twitter.com/IXhhlK21G4
— ANI (@ANI) September 5, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.