ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಫಾರ್ಮಾ ಇಂಡಸ್ಟ್ರೀಗಳಿಗೆ ಗುಣಮಟ್ಟದ ಔಷಧಿಗಳ ತಯಾರಿಕೆಗೆ ಗಮನಹರಿಸಬೇಕು ಮತ್ತು ವಿಶ್ವ ಮಾರುಕಟ್ಟೆಯಲ್ಲಿ ಅವುಗಳ ಪ್ರವೇಶವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ ರಜತ ಮಹೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಡಾ.ಮಾಂಡವೀಯ, ಗುಣಮಟ್ಟದ ಔಷಧ ನೀಡುವ ಮೂಲಕ ವಿಶ್ವದಲ್ಲಿ ದೇಶದ ಕೀರ್ತಿ ಹೆಚ್ಚಿದೆ. ಫಾರ್ಮಾ ಕ್ಷೇತ್ರವನ್ನು ಬಲಪಡಿಸಲು ಸಂಶೋಧನೆಗೆ ಒತ್ತು ನೀಡುವ ಅಗತ್ಯವಿದೆ ಎಂದರು.
“ನರೇಂದ್ರ ಮೋದಿ ಸರ್ಕಾರ ಬಡವರ ಮತ್ತು ರೈತರ ಪರ ಮಾತ್ರವಲ್ಲದೆ ಉದ್ಯಮ ಸ್ನೇಹಿಯಾಗಿದೆ. ಭಾರತೀಯ ಆರೋಗ್ಯ ಕ್ಷೇತ್ರವು ಗಳಿಸಿದ ಜಾಗತಿಕ ನಂಬಿಕೆಯು ರಾಷ್ಟ್ರವನ್ನು ವಿಶ್ವದ ಫಾರ್ಮಸಿ ಎಂದು ಕರೆಯಲು ಕಾರಣವಾಗಿದೆ ಮತ್ತು ಔಷಧೀಯ ಉತ್ಪನ್ನಗಳ ರಫ್ತು ಕೂಡ ಹೆಚ್ಚಾಗಿದೆ” ಎಂದು ಸಚಿವರು ಹೇಳಿದರು.
ಗುಣಮಟ್ಟದ ಔಷಧಗಳನ್ನು ಕೈಗೆಟಕುವ ದರದಲ್ಲಿ ಒದಗಿಸಲು ದೇಶದಲ್ಲಿ 8,500ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಈ ಸಂದರ್ಭದಲ್ಲಿ ಮಾಂಡವಿಯ ಅವರು ಔಷಧ ಬೆಲೆ ನಿಯಂತ್ರಣ ಆದೇಶ, 2013 ರ ಅಡಿಯಲ್ಲಿ ಕಡ್ಡಾಯವಾಗಿ ವಿವಿಧ ನಮೂನೆಗಳ ಸಲ್ಲಿಕೆಗಳಿಗೆ ಏಕ ಗವಾಕ್ಷಿಯನ್ನು ಒದಗಿಸಲು ಇಂಟಿಗ್ರೇಟೆಡ್ ಫಾರ್ಮಾಸ್ಯುಟಿಕಲ್ ಡೇಟಾಬೇಸ್ ಮ್ಯಾನೇಜ್ಮೆಂಟ್ ಸಿಸ್ಟಮ್ 2.0 ಅನ್ನು ಪ್ರಾರಂಭಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.