ನವದೆಹಲಿ: ಪ್ರತಿಷ್ಠಿತ ವಿಜ್ಞಾನಿ ಸಮೀರ್ ವಿ ಕಾಮತ್ ಅವರನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಮುಖ್ಯಸ್ಥರಾಗಿ ಗುರುವಾರ ನೇಮಕ ಮಾಡಲಾಗಿದೆ.
ಡಿಆರ್ಡಿಒದಲ್ಲಿ ನೌಕಾ ವ್ಯವಸ್ಥೆಗಳು ಮತ್ತು ಸಾಮಗ್ರಿಗಳ ಮಹಾನಿರ್ದೇಶಕರಾಗಿರುವ ಕಾಮತ್ ಅವರು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿ ನೇಮಕಗೊಂಡ ಜಿ ಸತೀಶ್ ರೆಡ್ಡಿ ಅವರ ಉತ್ತರಾಧಿಕಾರಿಯಾಗಲಿದ್ದಾರೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶದಿಂದ ತಿಳಿದು ಬಂದಿದೆ.
DRDO ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವಾಗಿದೆ.
ಕ್ಯಾಬಿನೆಟ್ ನೇಮಕಾತಿ ಸಮಿತಿಯು (ಎಸಿಸಿ) ಕಾಮತ್ ಅವರನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿ ಮತ್ತು ಡಿಆರ್ಡಿಒ ಅಧ್ಯಕ್ಷರಾಗಿ ನೇಮಕ ಮಾಡಲು ಅನುಮೋದಿಸಿದೆ.
ಈಗಿನ ಡಿಆರ್ಡಿಓ ಮುಖ್ಯಸ್ಥ ಜಿ ಸತೀಶ್ ರೆಡ್ಡಿ ಅವರನ್ನು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರನ್ನಾಗಿ ನೇಮಿಸಲು ಎಸಿಸಿ ಅನುಮೋದನೆ ನೀಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರೆಡ್ಡಿ ಅವರನ್ನು ಡಿಆರ್ಡಿಒ ಮುಖ್ಯಸ್ಥರಾಗಿ 2018ರ ಆಗಸ್ಟ್ನಲ್ಲಿ ಎರಡು ವರ್ಷಗಳ ಕಾಲ ನೇಮಿಸಲಾಗಿತ್ತು. ಆಗಸ್ಟ್ 2020 ರಲ್ಲಿ ಅವರಿಗೆ ಹುದ್ದೆಯಲ್ಲಿ ಎರಡು ವರ್ಷಗಳ ವಿಸ್ತರಣೆಯನ್ನು ನೀಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.