ನವದೆಹಲಿ: ಪಂಜಾಬ್ ರೀತಿಯಲ್ಲಿ ಗುಜರಾತಿನಲ್ಲೂ ನೆಲೆ ಕಂಡುಕೊಳ್ಳಲು ಆಮ್ ಆದ್ಮಿ ಪಕ್ಷ ಶತ ಪ್ರಯತ್ನಗಳನ್ನು ನಡೆಸುತ್ತಿದೆ. ಇದಕ್ಕಾಗಿ ಆಡಳಿತರೂಢ ಬಿಜೆಪಿ ಪಕ್ಷವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದೆ.
ಕಳೆದ ಮಂಗಳವಾರ ಆಮ್ ಆದ್ಮಿ ಪಕ್ಷ ಟ್ವಿಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯದ ಯುವಕರು ಹತಾಶರಾಗಿದ್ದಾರೆ ಮತ್ತು ಅವರಿಗೆ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಒಂದೇ ಭರವಸೆಯಾಗಿ ಕಾಣುತ್ತಿದೆ” ಎಂಬ ಶೀರ್ಷಿಕೆ ಕೊಟ್ಟು ವಿಡಿಯೋವೊಂದನ್ನು ಹಂಚಿಕೊಂಡಿದೆ.
ಎರಡು ನಿಮಿಷಗಳ ವಿಡಿಯೋದಲ್ಲಿ ಯುವಕನೊಬ್ಬ ಬಿಜೆಪಿ ಸರ್ಕಾರದ ವಿರುದ್ಧ ತನ್ನ ಹತಾಶೆಯನ್ನು ತೋರಿಸುತ್ತಾನೆ ಮತ್ತು ಗುಜರಾತಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಇದುವರೆಗೆ ನಡೆದಿಲ್ಲ ಎನ್ನುತ್ತಾನೆ.
“2012ರಲ್ಲಿ ನಾನು 7ನೇ ತರಗತಿಯಲ್ಲಿದ್ದಾಗ ಶಿಕ್ಷಣ ತ್ಯಜಿಸಿದೆ, ಮೋದಿಯವರು ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಸಾಕಷ್ಟು ಭರವಸೆ ನೀಡಿದ್ದರು, ಆದರೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. 8 ವರ್ಷಗಳಿಂದ ನನ್ನ ಗ್ರಾಮ ದೋರಾದಲ್ಲಿ ಶಾಲೆಗಳನ್ನು ಸ್ಥಾಪಿಸುವಲ್ಲಿ ಬಿಜೆಪಿ ಅಸಮರ್ಥವಾಗಿದೆ. ನಿಮ್ಮಂತಹ ಜನರು, ಸಾರ್…ಏನಾದರೂ ಮಾಡಿ… ನಾವು ಕೈಮುಗಿದು ಬೇಡಿಕೊಳ್ಳುತ್ತಿದ್ದೇವೆ” ಎಂದು ಸೆವೆನ್ ಸ್ಕೈ ಹೋಟೆಲ್ನಲ್ಲಿ ನಡೆದ ಸಂವಾದದಲ್ಲಿ ಕೇಜ್ರಿವಾಲ್ ಅವರಿಗೆ ಶಹಜಾದ್ ಖಾನ್ ಎಂಬಾತ ಹೇಳುವುದನ್ನು ಕೇಳಬಹುದು. ತಾನು ಬಡವ ಎಂಬಂತೆ ಈತ ಇಲ್ಲಿ ಫೋಸ್ ನೀಡಿದ್ದಾನೆ.
ಇಂಟರ್ನೆಟ್ನಲ್ಲಿ ಯಾವಾಗ ಈ ವಿಡಿಯೋ ಹರಿದಾಡಿತೋ ಕೂಡಲೇ ನೆಟ್ಟಿಗರು ಆತನ ಚರಿತ್ರೆಯನ್ನು ಹುಡುಕಾಡಿದ್ದಾರೆ.
ಈತನ ಸಾಮಾಜಿಕ ಮಾಧ್ಯಮದ ರೀಲ್ಗಳು ಮತ್ತು ಫ್ಯಾನ್ಸಿ ಕಾರುಗಳು ಮತ್ತು ದುಬಾರಿ ಸ್ಮಾರ್ಟ್ಫೋನ್ಗಳೊಂದಿಗಿನ ವೀಡಿಯೊಗಳನ್ನು ಹಲವಾರು ಮಂದಿ ಟ್ವಿಟರ್ನಲ್ಲಿ ಗಮನಕ್ಕೆ ತಂದರು, ಇದು ಆತನ ಆರ್ಥಿಕ ಹಿನ್ನೆಲೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.
ಕೆಲವರು ಆತ ಉತ್ತಮವಾಗಿ ನಟಸಿದ್ದಾನೆ ಆದರೆ ಕೇಜ್ರಿವಾಲ್ ಅವರಷ್ಟು ಉತ್ತಮವಾಗಿ ನಟಿಸಿಲ್ಲ ಎಂದಿದ್ದಾರೆ.
This is the level of Frustration of Gujarat's Youth against BJP 🔥
Youth says – @ArvindKejriwal is their last HOPE!#KejriwalNiShikshaGuarantee pic.twitter.com/USjvGjT8sE
— AAP (@AamAadmiParty) August 16, 2022
Excellent acting skills but still not better than Kejriwal ji 🤣🤣🤣🤣🤣 pic.twitter.com/l8jRItpLze
— Naweed (@Spoof_Junkey) August 16, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.