ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಭಿನ್ನ ಭಾಗಗಳನ್ನು ಸಂಪರ್ಕಿಸಲು ನಿರ್ಮಿಸಲಾದ ವಿಶ್ವದ ಅತಿ ಎತ್ತರದ ಸಿಂಗಲ್-ಆರ್ಚ್ ರೈಲು ಸೇತುವೆಯ ‘ಗೋಲ್ಡಡ್ ಜಾಯಿಂಟ್ʼ ಕಾಮಗಾರಿ ಇಂದು ಪೂರ್ಣಗೊಂಡಿದೆ. ಇದರ ಕಾಮಗಾರಿಯಲ್ಲಿ ತೊಡಗಿದ್ದ ಕೆಲಸಗಾರರು ತಿರಂಗಾ ಹಾರಿಸುವ ಮೂಲಕ, ಪಟಾಕಿ ಹಚ್ಚಿ ಸಂಭ್ರಮಿಸುವ ಮೂಲಕ ವಿಶಿಷ್ಟ ಸಂದರ್ಭವನ್ನು ಗುರುತಿಸಿದರು.
ಚೆನಾಬ್ ನದಿಯ ಮೇಲಿನ ವಿಶ್ವದ ಅತಿ ಎತ್ತರದ ಸಿಂಗಲ್-ಆರ್ಚ್ ರೈಲ್ವೇ ಸೇತುವೆಯ ಮೇಲಿನ ಓವರ್ಆರ್ಚ್ ಡೆಕ್ ಕಾಮಗಾರಿ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಶ್ರೀನಗರವನ್ನು ಭಾರತದ ಉಳಿದ ಭಾಗಗಳಿಗೆ ಸಂಪರ್ಕಿಸಲು ಸಾಧ್ಯವಾಗಲಿದೆ.
ಕೊಂಕಣ ರೈಲ್ವೆಯ ಅಧ್ಯಕ್ಷ ಮತ್ತು ಎಂಡಿ ಸಂಜಯ್ ಗುಪ್ತಾ ಮತನಾಡಿ, “ಇದು ಸುದೀರ್ಘ ಪ್ರಯಾಣವಾಗಿದೆ. “ಗೋಲ್ಡನ್ ಜಾಯಿಂಟ್” ಎಂಬ ಪದವನ್ನು ಸಿವಿಲ್ ಎಂಜಿನಿಯರ್ಗಳು ಸೃಷ್ಟಿಸಿದ್ದಾರೆ. ಇದು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾಗಿದೆ” ಎಂದಿದ್ದಾರೆ.
J&K | Chants of ‘Vande Matram’ echo as the golden joint of world’s highest railway bridge on Chenab river is completed; workers who worked on the project hoist National flag, burn crackers to celebrate pic.twitter.com/z5NzpAYUOT
— ANI (@ANI) August 13, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.