ನವದೆಹಲಿ: ಆಗಸ್ಟ್ 20 ರಿಂದ ಹೆಚ್ಚುವರಿ 24 ದೇಶೀಯ ವಿಮಾನಗಳನ್ನು ನಿರ್ವಹಿಸುವುದಾಗಿ ಏರ್ ಇಂಡಿಯಾ ಇಂದು ಘೋಷಿಸಿದೆ.
ಹೆಚ್ಚುವರಿ 24 ವಿಮಾನಗಳು ದೆಹಲಿಯಿಂದ ಮುಂಬೈ, ಬೆಂಗಳೂರು ಮತ್ತು ಅಹಮದಾಬಾದ್ಗೆ ಎರಡು ಹೊಸ ಹಾರಾಟಗಳನ್ನು ಮತ್ತು ಮುಂಬೈನಿಂದ ಚೆನ್ನೈ ಮತ್ತು ಹೈದರಾಬಾದ್ಗೆ, ಹಾಗೆಯೇ ಮುಂಬೈ-ಬೆಂಗಳೂರು ಮಾರ್ಗ ಮತ್ತು ಅಹಮದಾಬಾದ್-ಪುಣೆ ಮಾರ್ಗದಲ್ಲಿ ಒಂದು ಹೊಸ ಹಾರಾಟವನ್ನು ಒಳಗೊಂಡಿವೆ ಎಂದು ಏರ್ಲೈನ್ಸ್ ತಿಳಿಸಿದೆ.
ಏರ್ ಇಂಡಿಯಾ ಎಂಡಿ ಮತ್ತು ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ಮಾತನಾಡಿ, ”ಕಳೆದ ಆರು ತಿಂಗಳಿನಿಂದ, ಏರ್ ಇಂಡಿಯಾ ವಿಮಾನವನ್ನು ಸೇವೆಗೆ ಹಿಂದಿರುಗಿಸಲು ನಮ್ಮ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಈ ಪ್ರಯತ್ನವು ಇದೀಗ ಫಲ ನೀಡುತ್ತಿರುವುದು ನಮಗೆ ಸಂತೋಷ ತಂದಿದೆ” ಎಂದು ಹೇಳಿದ್ದಾರೆ.
ಏರ್ ಇಂಡಿಯಾದ ನ್ಯಾರೋಬಾಡಿ ಫ್ಲೀಟ್ 70 ರಷ್ಟಿದೆ, ಅದರಲ್ಲಿ 54 ಪ್ರಸ್ತುತ ಸೇವೆಗೆ ಅರ್ಹವಾಗಿವೆ. ಉಳಿದ 16 ವಿಮಾನಗಳು 2023 ರ ಆರಂಭದ ವೇಳೆಗೆ ಕ್ರಮೇಣ ಸೇವೆಗೆ ಮರಳುತ್ತವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.