ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ‘ಕ್ಲಬ್ ಹೌಸ್’ ಇತಿಹಾಸದಲ್ಲೇ ಮೊದಲ ಬಾರಿಗೆ 75 ಗಂಟೆಗಳ ಮ್ಯಾರಥಾನ್ ಕಾರ್ಯಕ್ರಮ ಆಗಸ್ಟ್ 12ರ ಸಂಜೆ 6 ಗಂಟೆಯಿಂದ ಜರುಗುತ್ತಿದೆ.
ಈ 75 ಗಂಟೆಗಳ ನಿರಂತರ ಕಾರ್ಯಕ್ರಮದಲ್ಲಿ ಪ್ರತಿ ಗಂಟೆಗೊಮ್ಮೆ ಒಬ್ಬ ಮಹನೀಯರಂತೆ ಒಟ್ಟು 75 ಅವಿಖ್ಯಾತ(ಇದುವರೆಗೆ ಹೆಚ್ಚು ಪರಿಚಯಿಸಲ್ಪಡದ) ಸ್ವಾತಂತ್ರ್ಯ ಕಲಿಗಳ ಪರಿಚಯ ನೀಡಲಾಗುತ್ತದೆ.
ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಈ ಸುಸಂದರ್ಭದಲ್ಲಿ ಉಪನಿಷತ್ತಿನಿಂದ ಹಿಡಿದು ಉಪಗ್ರಹದವರೆಗೆ ಭಾರತದ ಸಾಧನೆಗಳ ಹೆಗ್ಗುರುತುಗಳನ್ನು ಯಥಾಮತಿ,ಯಥಾಸಾಮರ್ಥ್ಯಾ ಸ್ಮರಿಸುವ ಮೂಲಕ ತಾಯಿ ಭಾರತಿಯ ಅಮೃತಪುತ್ರರಾದ ಭಾರತೀಯರಲ್ಲಿ ದೇಶಾಭಿಮಾನದ ಸ್ಫೂರ್ತಿಯ ನಂದಾದೀವಿಗೆಯನ್ನು ಬೆಳಗುವಂತೆ ಮಾಡುವುದೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶ.
‘ಭಾರತೀಯ ಕ್ಷಾತ್ರ ಪರಂಪರೆಯ ಮತ್ತು ಸ್ವರಾಜ್ಯ’ ವಿಷಯಗಳೂ ಸೇರಿದಂತೆ ಹಲವು ಸಂವಾದಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರಸಪ್ರಶ್ನೆ, ಏಕಪಾತ್ರಾಭಿನಯ, ‘ಈಸೂರು ದಂಗೆ’ ರಂಗನಾಟಕ ವಾಚನ, ‘ಹಲಗಲಿಯ ಬೇಡರು’ ಐತಿಹಾಸಿಕ ನಾಟಕ, ಚರ್ಚೆ, ಉಪನ್ಯಾಸ, ಸೋಬಾನೆ ಪದ, ಭಜನೆ, ದೇಶಭಕ್ತಿ ಗೀತೆಗಳು, ಜಾನಪದ ಗೀತೆಗಳು, ಹಾಸ್ಯ ಗೀತೆಗಳು, ನಾಟಕ, ತಾನಾಜಿ ವಂಶಸ್ಥರಿಂದಲೇ ಛತ್ರಪತಿ ಶಿವಾಜಿ ಮಹಾರಾಜರ ಜೀವನಗಾಥೆ ಕೇಳುವ ಅವಕಾಶ ಕಾರ್ಯಕ್ರಮದ ಮೂಲಕ ಸಿಗಲಿದೆ.
ಇವಿಷ್ಟೇ ಅಲ್ಲದೆ, ಭಾರತೀಯ ಕಾಲಮಾನ ರಾತ್ರಿ 12 ಗಂಟೆಯ ನಂತರ ಅನಿವಾಸಿ ಭಾರತೀಯರು ಪಾಲ್ಗೊಂಡು ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.