News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾಮನ್ವೆಲ್ತ್‌ ಗೇಮ್ಸ್:‌ ಇದುವರೆಗೆ 18 ಚಿನ್ನ ಸೇರಿ 55 ಪದಕ ಜಯಿಸಿದ ಭಾರತ

ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಕ್ರೀಡಾಕೂಟ 2022 ರಲ್ಲಿ ಭಾರತವು ಪದಕಗಳ ಸಾಧನೆಯನ್ನು ಮುಂದುವರಿಸಿದೆ. ನಿನ್ನೆಯಿಂದ 6 ಚಿನ್ನ ಸೇರಿದಂತೆ ಒಟ್ಟು 15 ಪದಕಗಳನ್ನು ಭಾರತದ ಕ್ರೀಡಾಳುಗಳು ಜಯಿಸಿದ್ದಾರೆ.

ಪ್ರಸ್ತುತ ಭಾರತ ಪಡೆದ ಪದಕಗಳ ಸಂಖ್ಯೆ 55ಕ್ಕೆ ಏರಿಕೆಯಾಗಿದೆ. ಪದಕ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ.

ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ನಿಕತ್ ಜರಿನ್, ಮತ್ತೋರ್ವ ಉದಯೋನ್ಮುಖ ಬಾಕ್ಸಿಂಗ್ ತಾರೆ ನೀತು ಗಂಗಾ, ಅಮಿತ್ ಪಂಗಾಲ್ ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. ಟ್ರಿಪಲ್ ಜಂಪ್ ನಲ್ಲಿ ಎಲ್ದೋಸ ಪಾಲ್ ಅವರು ಬಂಗಾರದ ಪದಕ ಜಯಿಸಿದ್ದಾರೆ. ಟೇಬಲ್ ಟೆನಿಸ್ ನಲ್ಲಿ ಭಾವಿನಾ ಪಟೇಲ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಕ್ರೀಡಾಕೂಟದಲ್ಲಿ ಇದುವರೆಗೆ ಭಾರತ 18 ಚಿನ್ನ, 15 ಬೆಳ್ಳಿ, ಮತ್ತು 22 ಕಂಚಿನ ಪದಕಗಳನ್ನು ಜಯಸಿದೆ.

ಇಂದು ಕ್ರೀಡಾಕೂಟದ ಅಂತಿಮ ದಿನವಾಗಿದ್ದು, ಮತ್ತಷ್ಟು ಪದಕಗಳು ಬರುವ ನಿರೀಕ್ಷೆ ಇದೆ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top