News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸ್ವಾತಂತ್ರ್ಯೋತ್ಸವ: ಭಾರತಕ್ಕೆ ಅತಿಥಿಯಾಗಿ ʼಜನ ಗಣ ಮನʼ ಖ್ಯಾತಿಯ ಯುಎಸ್ ಗಾಯಕಿ

ವಾಷಿಂಗ್ಟನ್‌: ʼಜನ ಗಣ ಮನʼ ಮತ್ತು ʼಓಂ ಜೈ ಜಗದೀಶ್‌ ಹರೇʼ ಹಾಡುಗಳನ್ನು ಅದ್ಭುತವಾಗಿ ಹಾಡಿ ಭಾರತೀಯರ ಹೃದಯ ಗೆದ್ದಿರುವ ಆಫ್ರಿಕಾ ಮೂಲಕ ಅಮೆರಿಕಾ ಗಾಯಕಿ  ಮೇರಿ ಮಿಲಾಬೆನ್‌ 75ನೇ ಸ್ವಾತಂತ್ರ್ಯೋತ್ಸವಕ್ಕೆ ಅತಿಥಿಯಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ.

ಭಾರತೀಯ ಸಾಂಸ್ಕೃತಿಕ ವ್ಯವಹಾರಗಳ ಮಂಡಳಿ(ಐಸಿಸಿಆರ್)‌ ಮಿಲಾಬೆನ್‌ ಅವರನ್ನು ಸ್ವಾತಂತ್ರ್ಯೋತ್ಸವದ ಅತಿಥಿಯಾಗಿ ಆಹ್ವಾನಿಸಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ  ಮಿಲಾಬೆನ್‌, “1959ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಮಾರ್ಟಿನ್‌ ಲೂಥರ್‌ ಕಿಂಗ್‌ ಅವರ ಸ್ಮರಣಾರ್ಥ ಭಾರತಕ್ಕೆ ಭೇಟಿ ನೀಡುವ ಅವಕಾಶ ಲಭಿಸಿದೆ. ಅಮೆರಿಕಾದ ಸಾಂಸ್ಕೃತಿಕ ರಾಯಭಾರಿಯಾಗಿ ಭಾಗವಹಿಸುತ್ತಿರುವುದು ಸಂತಸ ತಂದಿದೆ” ಎಂದಿದ್ದಾರೆ.

“ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ. ಈ ಸಂದರ್ಭದಲ್ಲಿ ಮಾರ್ಟಿನ್‌ ಲೂಥರ್‌ ಕಿಂಗ್‌ ಅವರು ಹೇಳಿದ, ಬೇರೆ ದೇಶಗಳಿಗೆ ಪ್ರವಾಸಿಗನಾಗಿ ಹೋಗಬಹುದು. ಆದರೆ ಭಾರತಕ್ಕೆ ನಾನೊಬ್ಬ ಯಾತ್ರಾರ್ಥಿಯಾಗಿ ಬಂದಿದ್ದೇನೆ ಎಂಬ ಮಾತು ನೆನಪಾಗುತ್ತಿದೆ” ಎಂದಿದ್ದಾರೆ.

ಐಸಿಸಿಆರ್‌ ಆಹ್ವಾನಿಸುತ್ತಿರುವ ಅಮೆರಿಕಾದ ಮೊದಲ ಕಲಾವಿದೆ ಮಿಲಾಬೆನ್‌ ಅವರಾಗಿದ್ದಾರೆ. ಅವರು ಅಮೆರಿಕಾದ ಅಧಿಕೃತ ಅತಿಥಿಯಾಗಿ ಅಲ್ಲಿನ ಸಾಂಸ್ಕೃತಿ ರಾಯಭಾರಿಯಾಗಿ ಭಾರತಕ್ಕೆ ಆಗಮಿಸಲಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top