News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

75ನೇ ಸ್ವಾತಂತ್ರ್ಯೋತ್ಸವ: ‌ʼಇಂಡಿಯಾ ಕಿ ಉಡಾನ್‌ʼ ಆರಂಭಿಸಿದ ಗೂಗಲ್

ನವದೆಹಲಿ: ಸ್ವಾತಂತ್ರ್ಯದ  75 ವರ್ಷಗಳ ಪಯಣದಲ್ಲಿ ಭಾರತವು ಸಾಧಿಸಿರುವ ಮಹತ್ವದ ಮೈಲಿಗಲ್ಲುಗಳನ್ನು ಹೊಂದಿಸುವ ಮೂಲಕ ಸಾಫ್ಟ್‌ವೇರ್ ದೈತ್ಯ ಗೂಗಲ್ ಶುಕ್ರವಾರ ವೈವಿಧ್ಯ ಆನ್‌ಲೈನ್‌ ಡ್ರಾಯಿಂಗ್‌ ಆರ್ಚಿವ್ಸ್‌ ಅನ್ನು ಹೊರ ತಂದಿದೆ. ಇದರ ಮೂಲಕ ದೇಶದ ಕಥೆಯನ್ನು ಕಲಾತ್ಮಕ ಚಿತ್ರಣಗಳೊಂದಿಗೆ ವಿವರಿಸುತ್ತದೆ.

‘ಇಂಡಿಯಾ ಕಿ ಉಡಾನ್’ ಎಂಬ ಹೆಸರಿನ ಗೂಗಲ್ ಆರ್ಟ್ಸ್ & ಕಲ್ಚರ್ ಮೂಲಕ ಕಾರ್ಯಗತಗೊಳಿಸಿದ ಈ ಯೋಜನೆಯು ದೇಶದ ಸಾಧನೆಗಳನ್ನು ಕೊಂಡಾಡಿದೆ ಮತ್ತು ಕಳೆದ 75 ವರ್ಷಗಳಲ್ಲಿ ಭಾರತದ ಅಚಲ ಸಾಧನೆಯನ್ನು ಅದ್ಭುತವಾದ ರೀತಿಯಲ್ಲಿ ವಿವರಿಸಿದೆ.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಮತ್ತು ಸಂಸ್ಕೃತಿ ಸಚಿವಾಲಯ ಮತ್ತು ಗೂಗಲ್‌ನ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ದೆಹಲಿಯ ಸುಂದರ್ ನರ್ಸರಿಯಲ್ಲಿ ನಡೆದ  ಕಾರ್ಯಕ್ರಮದಲ್ಲಿ ಈ ಯೋಜನೆಯನ್ನು ಅಧಿಕೃತವಾಗಿ ಆರಂಭಿಸಲಾಗಿದೆ.

ರಾಷ್ಟ್ರವ್ಯಾಪಿ ಆಚರಣೆಗಳ ಭಾಗವಾಗಿ ಗೂಗಲ್ ಸಂಸ್ಕೃತಿ ಸಚಿವಾಲಯದೊಂದಿಗೆ ತನ್ನ ಸಹಯೋಗವನ್ನು ಘೋಷಿಸಿದ್ದು, ”ಭಾರತೀಯರ ಕೊಡುಗೆಗಳನ್ನು ಮತ್ತು 1947 ರಿಂದ ಭಾರತದ ವಿಕಾಸವನ್ನು ಪ್ರದರ್ಶಿಸುವ ಮಾಹಿತಿಯುಕ್ತ ಆನ್‌ಲೈನ್ ವಿಷಯವನ್ನು ತಲುಪಲು ಈ ಯೋಜನೆಯು ಕೇಂದ್ರೀಕರಿಸಿದೆ ಎಂದು  ತಿಳಿಸಿದೆ.

2022 ರ ಜನಪ್ರಿಯ Doodle4Google ಸ್ಪರ್ಧೆ ‘ಮುಂದಿನ 25 ವರ್ಷಗಳಲ್ಲಿ, ನನ್ನ ಭಾರತ’ ಎಂಬ ವಿಷಯದ ಕುರಿತು ಜರುಗಲಿದ್ದು, 1-10 ತರಗತಿಗಳ ವಿದ್ಯಾರ್ಥಿಗಳಿಗೆ  ಮುಕ್ತವಾಗಿದೆ ಎಂದು ಗೂಗಲ್ ಘೋಷಿಸಿದೆ. ವಿಜೇತರಿಗೆ ಭಾರೀ ಮೊತ್ತದ ಬಹುಮಾನ ಸಿಗಲಿದೆ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top