News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟ ಪರೀಕ್ಷೆಗೆ ಮೊಬೈಲ್ ತಪಾಸಣಾ ವ್ಯಾನ್‌

ನವದೆಹಲಿ: ಕೇಂದ್ರ ಸರ್ಕಾರವು  ಗುಜರಾತ್, ರಾಜಸ್ಥಾನ, ಒಡಿಶಾ ಮತ್ತು ಕರ್ನಾಟಕ – ಈ ನಾಲ್ಕು ರಾಜ್ಯಗಳಲ್ಲಿ ನಾನ್-ಡೆಸ್ಟ್ರಕ್ಟಿವ್ ಟೆಸ್ಟಿಂಗ್ (ಎನ್‌ಡಿಟಿ) ಮೂಲಕ ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟ ತಪಾಸಣೆಗಾಗಿ ಮೊಬೈಲ್ ತಪಾಸಣಾ ವ್ಯಾನ್‌ಗಳ (ಎಂಐವಿ) ಸೇವೆಗಳನ್ನು ಪ್ರಾಯೋಗಿಕವಾಗಿ ಆರಂಭಿಸಿದೆ.

ರಸ್ತೆ ಸಾರಿಗೆ ಸಚಿವಾಲಯದ ಜಾಗತಿಕ ಗುಣಮಟ್ಟದ ಮಾನದಂಡಗಳೊಂದಿಗೆ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವ ಬದ್ಧತೆಯ ಭಾಗವಾಗಿ ಈ ಸೇವಗಳನ್ನು ಆರಂಭಿಸಲಾಗುತ್ತಿದೆ.

ಈ ಮೊಬೈಲ್ ತಪಾಸಣಾ ವ್ಯಾನ್‌ಗಳ ಬಳಕೆಯು ಗುಣಮಟ್ಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಲು ಹೆಚ್ಚು ಪೂರ್ವಭಾವಿ ವಿಧಾನವನ್ನು ಪರಿಚಯಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ಕಾರ್ಯಗಳಲ್ಲಿ ಅಸ್ತಿತ್ವದಲ್ಲಿರುವ ಗುಣಮಟ್ಟ ನಿಯಂತ್ರಣ ಮತ್ತು ಗುಣಮಟ್ಟ ಸ್ವೀಕಾರ ವ್ಯವಸ್ಥೆಗಳನ್ನು ಬಲಪಡಿಸುತ್ತದೆ.

ಈ ಎಂಐವಿಗಳನ್ನು ಬಳಸಿಕೊಂಡು ಪ್ರತಿ ರಾಜ್ಯದಲ್ಲಿ ತ್ರೈಮಾಸಿಕ 2,000 ಕಿಮೀ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಪರಿಶೀಲಿಸಲಾಗುತ್ತದೆ. ಎನ್‌ಎಚ್‌ಎಐ/ಎನ್‌ಎಚ್‌ಐಡಿಸಿಎಲ್/ರಾಜ್ಯ ಪಿಡಬ್ಲ್ಯೂಡಿಗಳು ಮತ್ತು ಸಚಿವಾಲಯದ ಇತರ ಕಾರ್ಯನಿರ್ವಾಹಕ ಏಜೆನ್ಸಿಗಳು ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳನ್ನು ತಪಾಸಣೆ ನಡೆಸಲಾಗುತ್ತದೆ.

ಗುಜರಾತ್‌ಗೆ ಸಂಬಂಧಿಸಿದ ಒಪ್ಪಂದಕ್ಕೆ ನನ್ನೆ ಸಹಿ ಹಾಕಲಾಯಿತು. ರಾಜಸ್ಥಾನ, ಒಡಿಶಾ ಮತ್ತು ಕರ್ನಾಟಕ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ ಹಾಕಲಾಗುತ್ತದೆ. ಅಂತಹ ಹೆಚ್ಚಿನ ವ್ಯಾನ್‌ಗಳು ಭವಿಷ್ಯದಲ್ಲಿ ಇತರ ರಾಜ್ಯಗಳಲ್ಲಿ ತೊಡಗಿಸಿಕೊಳ್ಳುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top