News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತಾಯಿಯಂತೆ ಚೆನ್ನೈ ಅಕಾಡಮಿಯಿಂದಲೇ ಸೇನೆಗೆ ಸೇರಿದ ಮಗ

ಚೆನ್ನೈ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ತಾಯಿ ಮತ್ತು ಈಗಷ್ಟೇ ಸೇನೆ ಸೇರಿ ದೇಶಸೇವೆಗೆ ಅಣಿಯಾಗುತ್ತಿರುವ ಮಗನ ಕಥೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಹೃದಯ ಗೆದ್ದಿದೆ. ನಿವೃತ್ತ ಮೇಜರ್ ಸ್ಮಿತಾ ಚತುರ್ವೇದಿ ಅವರ ಹಾದಿಯನ್ನೇ ಅನುಸರಿಸಿರುವ ಅವರ ಮಗ ಕೂಡ ಪ್ರಸ್ತುತ ಸೇನೆಗೆ ಸೇರ್ಪಡೆಗೊಂಡಿದ್ದಾರೆ.

ಚತುರ್ವೇದಿ ಅವರು 27 ವರ್ಷಗಳ ಹಿಂದೆ ಉತ್ತೀರ್ಣರಾಗಿ ಸೇನೆಗೆ ಸೇರ್ಪಡೆಗೊಂದಿದ್ದ ಚೆನ್ನೈನ ರಕ್ಷಣಾ ತರಬೇತಿ ಅಕಾಡೆಮಿಯಿಂದಲೇ ಅವರ ಮಗ ಕೂಡ ಶನಿವಾರ ಭಾರತೀಯ ಸೇನೆಗೆ ನೇಮಕಗೊಂಡಿದ್ದಾರೆ.

ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ನಡೆದ ಸಮಾರಂಭವನ್ನು ಮಾಲ್ಡೀವ್ಸ್‌ನ ರಕ್ಷಣಾ ಪಡೆಗಳ ಮುಖ್ಯಸ್ಥರಾದ ಮೇಜರ್ ಜನರಲ್ ಅಬ್ದುಲ್ಲಾ ಶಮಾಲ್ ಅವರು ಪರಿಶೀಲಿಸಿದರು. ಒಟ್ಟು 125 ಪುರುಷ ಮತ್ತು 41 ಮಹಿಳಾ ಕೆಡೆಟ್‌ಗಳನ್ನು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಭಾರತೀಯ ಸೇನೆಗೆ ನಿಯೋಜಿಸಲಾಯಿತು. ಸಚಿವಾಲಯದ ಪ್ರಕಾರ, ವಿದೇಶಗಳ 30 ಕೆಡೆಟ್‌ಗಳು ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.

ಚೆನ್ನೈನ ಸಾರ್ವಜನಿಕ ಸಂಪರ್ಕ ಅಧಿಕಾರಿ ರಕ್ಷಣಾ ಸಚಿವಾಲಯ ಈ ವಿಶೇಷ ದಿನದಿಂದ ಮೇಜರ್ (ನಿವೃತ್ತ) ಸ್ಮಿತಾ ಮತ್ತು ಅವರ ಮಗನ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಮೇಜರ್ ಸ್ಮಿತಾ ಚತುರ್ವೇದಿ (ನಿವೃತ್ತ), 27 ವರ್ಷಗಳ ಹಿಂದೆ 1995 ರಲ್ಲಿ ಚೆನ್ನೈನ ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಯಿಂದ ನಿಯೋಜಿಸಲ್ಪಟ್ಟರು, ಇಂದು ಅದೇ ಅಕಾಡೆಮಿಯಲ್ಲಿ ಅವರ ಮಗ ಕೂಡ ಅವರದ್ದೇ ರೀತಿಯಲ್ಲಿ ಪದವಿ ಪಡೆಯುವುದನ್ನು ಕಣ್ತುಂಬಿಕೊಂಡರು” ಎಂದಿದೆ.

ಈ ಟ್ವಿಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ತಾಯಿ ಮತ್ತು ಮಗನಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top