News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2017ರಿಂದ SHe-Box ಮೂಲಕ 1,349 ದೂರುಗಳನ್ನು ಸ್ವೀಕರಿಸಲಾಗಿದೆ: ಕೇಂದ್ರ

ನವದೆಹಲಿ: ಕೇಂದ್ರದ ಪೋರ್ಟಲ್ ಶೀ-ಬಾಕ್ಸ್ ಮೂಲಕ 2017ರಿಂದ ಇದುವರೆಗೆ 1,349 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದ ದೂರುಗಳ ನೋಂದಣಿಗಾಗಿ ಶೀ-ಬಾಕ್ಸ್ ಪೋರ್ಟಲ್‌ ಅನ್ನು 2017ರಲ್ಲಿ ಆರಂಭಿಸಿತ್ತು.

ಕೇಂದ್ರದ ಈ ಆನ್‌ಲೈನ್ ದೂರು ಪೋರ್ಟಲ್ ಅನ್ನು ‘ಲೈಂಗಿಕ ಕಿರುಕುಳ ವಿರುದ್ಧದ ಬಾಕ್ಸ್’ ಆಗಿ ಸ್ಥಾಪಿಸಲಾಗಿದೆ. ಮಹಿಳೆಯರ ಮೇಲಿನ ಕಿರುಕುಳದ ದೂರುಗಳ ದಾಖಲಾತಿಯನ್ನು ಪಡೆಯಲು, ಕೆಲಸದ ಸ್ಥಳದಲ್ಲಿ ಮಹಿಳೆಯರ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ 2013 ರ ಅಡಿ  ಇದನ್ನು ಸ್ಥಾಪಿಸಲಾಯಿತು.

ಶೀ-ಬಾಕ್ಸ್ ಮೂಲಕ ದೂರು ಸಲ್ಲಿಸಿದ ಬಳಿಕ ಸೂಕ್ತ ಕ್ರಮಕ್ಕಾಗಿ ನೇರವಾಗಿ ಅಧಿಕಾರಿಗಳು ದೂರುದಾರರನ್ನು ತಲುಪುತ್ತಾರೆ ಎಂದು ಇರಾನಿ ಹೇಳಿದ್ದಾರೆ.

ಪರಿಹರಿಸಲಾದ ಪ್ರಕರಣಗಳ ಸಂಖ್ಯೆಯ ಅಂಕಿ- ಅಂಶಗಳ ಪ್ರದರ್ಶನ ಆಯಾ ಅಧಿಕಾರಿಗಳು ಕಾಯಿದೆಯಡಿ ನಿರ್ವಹಿಸುತ್ತಾರೆ. ಒಟ್ಟು ಪ್ರಕರಣಗಳ ಸಂಖ್ಯೆ ವೆಬ್ ಸೈಟ್ ಪ್ರಕಾರ, 2017 ರಲ್ಲಿ ಪ್ರಾರಂಭವಾದಾಗಿನಿಂದ 2022ರ ಜುಲೂ 27ರವರೆಗೆ 1,349 ಆಗಿದೆ ಎಂದು ಇರಾನಿ ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top