News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಏಪ್ರಿಲ್-ಜೂನ್‌ನಲ್ಲಿ 37,609 ಕೋಟಿ ರೂ ತಲುಪಿದ ಭಾರತ ಔಷಧ ರಫ್ತು

ನವದೆಹಲಿ: ಭಾರತದ ಔಷಧೀಯ ರಫ್ತುಗಳು 2013 ರ ಏಪ್ರಿಲ್-ಜೂನ್‌ನಲ್ಲಿ ಇದ್ದ 15,260 ಕೋಟಿ ರೂಪಾಯಿಗಳಿಂದ 2022 ರ ಏಪ್ರಿಲ್-ಜೂನ್‌ನಲ್ಲಿ 37,609 ಕೋಟಿ ರೂಪಾಯಿಗಳಿಗೆ 146% ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

ಮಾಂಡವಿಯಾ ಅವರು ಟ್ವೀಟ್ ಮಾಡಿ, “ಜಗತ್ತಿಗೆ ಭಾರತದ ಗುಣಪಡಿಸುವ ಕೈ ಆಗಿದೆ. ಭಾರತದಲ್ಲಿ ತಯಾರಿಸಿದ ಔಷಧೀಯ ಉತ್ಪನ್ನಗಳ ರಫ್ತು ಹೊಸ ಎತ್ತರವನ್ನು ಮುಟ್ಟುತ್ತಲೇ ಇದೆ! 2013 ರ ಇದೇ ಅವಧಿಗಿಂತ 2022 ರ ಏಪ್ರಿಲ್-ಜೂನ್‌ನಲ್ಲಿ ಔಷಧೀಯ ಉತ್ಪನ್ನಗಳ ರಫ್ತಿನಲ್ಲಿ 146 % ಹೆಚ್ಚಳವಾಗಿದೆ” ಎಂದಿದ್ದಾರೆ.

ಜೂನ್ 2022-23 ರಲ್ಲಿ ಒಟ್ಟು ರಫ್ತುಗಳು ಶೇಕಡಾ 22.22 ರಷ್ಟು ಏರಿಕೆಯಾಗಿ $116.77 ಬಿಲಿಯನ್‌ಗೆ ತಲುಪಿದೆ ಆದರೆ ಅದೇ ಅವಧಿಯಲ್ಲಿ ಆಮದುಗಳು ಶೇಕಡಾ 47.31 ರಷ್ಟು ಏರಿಕೆಯಾಗಿ $187.02 ಶತಕೋಟಿಗೆ ತಲುಪಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ ವ್ಯಾಪಾರ ಕೊರತೆಯು $70.25 ಶತಕೋಟಿಯಷ್ಟಿದೆ.

ಈ ನಡುವೆ, ಸೋಮವಾರದ ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾರತದ ಸರಕು ರಫ್ತುಗಳು ಜೂನ್‌ನಲ್ಲಿ 16.78 ರಷ್ಟು ಏರಿಕೆಯಾಗಿ $37.94 ಶತಕೋಟಿ ಡಾಲರ್‌ಗೆ ತಲುಪಿದೆ ಆದರೆ ವ್ಯಾಪಾರ ಕೊರತೆಯು $25.63 ಶತಕೋಟಿಗೆ ತಲುಪಿದೆ. ರಫ್ತು ಬೆಳವಣಿಗೆಯು ಮೇ ತಿಂಗಳಲ್ಲಿ 20.55 ಪ್ರತಿಶತದಿಂದ ಮತ್ತು ಜೂನ್ 2021 ರಲ್ಲಿ 48.34 ಪ್ರತಿಶತಕ್ಕೆ ಏರಕೆಯಾಗಿದೆ ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top