News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಂಡ್ ಯಾಟ್ಸೆ ಮತ್ತು ಡಿಜೊ ಜೊಂಗೊ ಪರ್ವತ ಶ್ರೇಣಿ ಏರಿದ 13ರ ಬಾಲಕ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಹೈದರಾಬಾದ್‌ನ  ಬಾಲಕ ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾನೆ. ತೆಲಂಗಾಣದ ಹೈದರಾಬಾದ್‌ನ 13 ವರ್ಷದ ವಿಶ್ವನಾಥ್ ಕಾತಿಕೇ 9 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಈತ ಲಡಾಖ್ ಪ್ರದೇಶದ ಮರ್ಖಾ ಕಣಿವೆಯಲ್ಲಿರುವ ಕಂಡ್ ಯಾಟ್ಸೆ ಮತ್ತು ಡಿಜೊ ಜೊಂಗೊ ಪರ್ವತ ಶ್ರೇಣಿಗಳನ್ನು ಏರುವಲ್ಲಿ ಯಶಸ್ವಿಯಾಗಿದ್ದಾನೆ.

ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವನಾಥ್, “ನಾನು ಜುಲೈ 9 ರಂದು ಕಾಂಗ್ ಯಾಟ್ಸೆ ಮತ್ತು ಡಿಜೊ ಜೊಂಗೊಗೆ ಟ್ರೆಕ್ಕಿಂಗ್ ಅನ್ನು ಪ್ರಾರಂಭಿಸಿದೆ ಮತ್ತು  ಜುಲೈ 22 ರಂದು ಟ್ರಕ್ಕಿಂಗ್ ಕೊನೆಗೊಳಿಸಿದೆ. ನಾವು ಕ್ರಾಂಪನ್ ಪಾಯಿಂಟ್ ತಲುಪಿದಾಗ ಬೇಸ್ ಕ್ಯಾಂಪ್‌ನಿಂದ ಶಿಖರದವರೆಗಿನ ಪ್ರಯಾಣವು ಅಷ್ಟು ಸುಲಭದ್ದಾಗಿರಲಿಲ್ಲ. ಏಕೆಂದರೆ, ಎತ್ತರದಲ್ಲಿ, ಗಾಳಿಯ ಒತ್ತಡವು ಕಡಿಮೆಯಾಗುತ್ತದೆ. ಆದರೂ ನಾನು ಪಟ್ಟು ಬಿಡದೆ ಮುಂದೆ ಸಾಗಿದೆ. ಈ ಸಾಧನೆ ಮಾಡಲು ನಾನು ಪಟ್ಟ ಶ್ರಮವನ್ನು ನೆನಪಿಸಿಕೊಂಡೆ ಮತ್ತು ಈಗ ಅದು ನಿಜವಾಗಿದೆ” ಎಂದಿದ್ದಾರೆ.

“ಗಾಳಿಯಲ್ಲಿ ತೇವಾಂಶದ ಕೊರತೆಯಿಂದಾಗಿ ನಾನು ಬಹಳಷ್ಟು ಉಸಿರಾಟದ ಸಮಸ್ಯೆಗಳನ್ನು ಎದುರಿಸಿದೆ. ನನ್ನ ಬಾಯಿ ಒಣಗಿತು,  ನನಗೆ ದಣಿವು ಮತ್ತು ಹಸಿವು ಕೂಡ ಆಗಿತ್ತು. ಆದರೂ ಮುಂದೆ ಸಾಗಿದೆ ”ಎಂದು ಅವರು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top