News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕ್ಯಾಪ್ಟನ್‌ ವಿಕ್ರಮ್‌ ಬಾತ್ರಾರ ಅತೀದೊಡ್ಡ ಅಂಡರ್‌ವಾಟರ್ ಭಾವಚಿತ್ರ‌ ಪ್ರದರ್ಶನ

ತಿರುವನಂತಪುರಂ: ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ಅಂಗವಾಗಿ ತಿರುವನಂತಪುರದ ಪಂಗೋಡ್ ಮಿಲಿಟರಿ ಸ್ಟೇಷನ್ ಇಂದು ಕಲಾವಿದ ಡಾ. ವಿನ್ಸಿ ಸುರೇಶ್ ಅವರ ಮೂಲಕ ಕಾರ್ಗಿಲ್‌ ವೀರ  ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ನೀರೊಳಗಿನ ಅತದೊಡ್ಡ ಭಾವಚಿತ್ರವನ್ನು ಪ್ರದರ್ಶಿಸಿದೆ.

ಕಾರ್ಗಿಲ್ ವಿಜಯ್ ದಿವಸ್ ಸ್ಮರಣಾರ್ಥ ಬಾಂಡ್ ವಾಟರ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಸ್ಕೂಬಾ ತಂಡದ ಸಹಯೋಗದಲ್ಲಿ ಭಾರತೀಯ ಸೇನೆಯು ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ರಕ್ಷಣಾ ಹೇಳಿಕೆ ತಿಳಿಸಿದೆ.

ಪಂಗೋಡ್ ಮಿಲಿಟರಿ ನಿಲ್ದಾಣದಲ್ಲಿ ರಚಿಸಲಾದ ಕ್ಯಾಪ್ಟನ್ ಬಾತ್ರಾ ಅವರ ಅತಿದೊಡ್ಡ ನೀರೊಳಗಿನ ಭಾವಚಿತ್ರವು ಯುಆರ್‌ಎಫ್ ವಿಶ್ವ ದಾಖಲೆಗಳನ್ನು (ಯುನಿವರ್ಸಲ್ ರೆಕಾರ್ಡ್ಸ್ ಫೋರಂ) ಪಡೆದುಕೊಂಡಿದೆ. ಈವೆಂಟ್‌ನಲ್ಲಿ ಯುಆರ್‌ಎಫ್ ಅಧಿಕಾರಿಗಳು ವಿಶ್ವ ದಾಖಲೆ ಪ್ರಮಾಣಪತ್ರವನ್ನು ಪ್ರದಾನಿಸಿದ್ದಾರೆ.

1,500 ಚದರ ಅಡಿ ವಿಸ್ತೀರ್ಣದ ವಿಶಿಷ್ಟವಾದ ಅಂಡರ್‌ವಾಟರ್ ಭಾವಚಿತ್ರ ಸ್ಥಾಪನೆಯನ್ನು ಪೂರ್ಣಗೊಳಿಸಲು ಎಂಟು ಗಂಟೆಗಳನ್ನು ತೆಗೆದುಕೊಳ್ಳಲಾಗಿದೆ.

”ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಪಂಗೋಡು ಸೇನಾ ಠಾಣೆಯ ಸ್ಟೇಷನ್ ಕಮಾಂಡರ್ ಅವರು ಬಾಂಡ್ ವಾಟರ್ ಕಲಾವಿದ ಮತ್ತು ತಂಡಕ್ಕೆ ಸ್ಮರಣಿಕೆಯನ್ನು ಹಸ್ತಾಂತರಿಸಿದರು. ಕಾರ್ಯಕ್ರಮದ ಅಂಗವಾಗಿ ಮಿಲಿಟರಿ ಬ್ಯಾಂಡ್ ಪ್ರದರ್ಶನವನ್ನು ಸಹ ಆಯೋಜಿಸಲಾಗಿದೆ “ಎಂದು ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಪ್ರಕಟಣೆ ತಿಳಿಸಿದೆ.

ಮತ್ತೊಂದು ಕಾರ್ಯಕ್ರಮದಲ್ಲಿ, ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಪಂಗೋಡ್ ಯುದ್ಧ ಸ್ಮಾರಕದಲ್ಲಿ ಸ್ಟೇಷನ್ ಕಮಾಂಡರ್ ಅವರು ಕಾರ್ಗಿಲ್ ಯೋಧರಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top