ನವದೆಹಲಿ: ಮನೆಮಂದಿ ಒಂದೇ ಸಮಯದಲ್ಲಿ ತಮ್ಮ ನೆಚ್ಚಿನ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಕಿತ್ತಾಡುವ ಕಾಲ ಸ್ವಲ್ಪ ಸಮಯದಲ್ಲೇ ದೂರವಾಗಲಿದೆ. ಎಲ್ಜಿ ಏಕಕಾಲದಲ್ಲಿ ಎರಡು ಬದಿಗಳಲ್ಲೂ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾದ ಒಎಲ್ಇಡಿ ಟಿವಿಯೊಂದನ್ನು ಬಿಡುಗಡೆಗೊಳಿಸಿದೆ.
ಬರ್ಲಿನ್ನ ಐಎಫ್ಎ 2015, ವ್ಯಾಪಾರ ಪ್ರದರ್ಶನದಲ್ಲಿ ಪರಿಚಯಿಸಲಾದ 111 ಇಂಚಿನ ಡಬಲ್ ಸ್ಕ್ರೀನ್ ಟಿವಿ, ಮೂರು 65 ಇಂಚುಗಳ ಯುಎಚ್ಡಿ, ಒಎಲ್ಇಡಿ ಡಿಸ್ಪ್ಲೇ ಹೊಂದಿದೆ. ಇದರಲ್ಲಿ ಏಕಕಾಲದಲ್ಲಿ ಎರಡು ಭಾಗಗಳಲ್ಲೂ ವೀಕ್ಷಿಸಬಹುದಾಗಿದೆ.
ಇದರ ಜೊತೆಯಲ್ಲಿ 55 ಇಂಚುಗಳ ಡಬಲ್ ಸೈಡೆಡ್ 5.3 ಎಂ.ಎಂ. ದಪ್ಪದ ಡಿಸ್ಪ್ಲೇ ಹೊಂದಿರುವ ಟಿವಿಯನ್ನೂ ಬಿಡುಗಡೆಗೊಳಿಸಲಿದೆ. ಆದರೆ ಒಂದೇ ಬಾರಿಗೆ ಎರಡು ಕಾರ್ಯಕ್ರಮ ವೀಕ್ಷಿಸಲು ಹೆಡ್ಫೋನ್ ಬಳಸಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.