News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದು ಲೋಕಮಾನ್ಯ ತಿಲಕ್‌, ಚಂದ್ರಶೇಖರ್‌ ಆಜಾದ್‌ ಜನ್ಮದಿನ: ಮೋದಿ ನಮನ

ನವದೆಹಲಿ: ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡಿರುವ ಲೋಕಮಾನ್ಯ ತಿಲಕ್ ಮತ್ತು ಚಂದ್ರಶೇಖರ್ ಆಜಾದ್ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಬ್ಬರು ಮಹಾ ಪುರುಷರ ಜನ್ಮದಿನವನ್ನು ಟ್ವಿಟ್‌ ಮಾಡುವ ಮೂಲಕ ಸ್ಮರಿಸಿದ್ದಾರೆ.

“ತಾಯಿ ಭಾರತಿಯ ಇಬ್ಬರು ಶ್ರೇಷ್ಠ ಪುತ್ರರಾದ ಲೋಕಮಾನ್ಯ ತಿಲಕ್ ಮತ್ತು ಚಂದ್ರಶೇಖರ್ ಆಜಾದ್ ಅವರ ಜನ್ಮದಿನದಂದು ನಾನು ಅವರಿಗೆ ನಮಸ್ಕರಿಸುತ್ತೇನೆ. ಈ ಇಬ್ಬರು ಧೀಮಂತರು ಧೈರ್ಯ ಮತ್ತು ದೇಶಭಕ್ತಿಯನ್ನು ಪ್ರತಿಬಿಂಬಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಮನ್‌ ಕೀ ಬಾತ್ ಸಂದರ್ಭದಲ್ಲಿ ನಾನು ಅವರ ಬಗ್ಗೆ ಮಾತನಾಡಿದ್ದನ್ನು ಹಂಚಿಕೊಳ್ಳುತ್ತಿದ್ದೇನೆ”‌ ಎಂದು ಟ್ವಿಟ್‌ ಮಾಡಿ ವಿಡಿಯೋ ತುಣಕನ್ನು ಹಂಚಿಕೊಂಡಿದ್ದಾರೆ..

“ಲೋಕಮಾನ್ಯ ತಿಲಕರ ಅಮರ ಪರಂಪರೆಗಳಲ್ಲಿ ಒಂದಾದ ಬೃಹತ್ ಗಣೇಶ ಉತ್ಸವವು ಜನರಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳಗಿಸಿತು. ಮುಂಬೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಲೋಕಮಾನ್ಯ ತಿಲಕ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಲೋಕಮಾನ್ಯ ಸೇವಾ ಸಂಘಕ್ಕೆ ಭೇಟಿ ನೀಡಿದ್ದೆ” ಎಂದು ಟ್ವಿಟ್‌ ಮಾಡಿ ತಮ್ಮ ಭೇಟಿಯ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top