News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಿಂಗಾಪುರದಿಂದ ಭಾರತಕ್ಕೆ ಕೇಂದ್ರ ಕಛೇರಿ ಸ್ಥಳಾಂತರಿಸಲು PhonePe ಯೋಜನೆ

ನವದೆಹಲಿ: ವಾಲ್‌ಮಾರ್ಟ್ ಗ್ರೂಪ್ ಡಿಜಿಟಲ್ ಪಾವತಿ ಸಂಸ್ಥೆ PhonePe ತನ್ನ ಪ್ರಧಾನ ಕಛೇರಿಯನ್ನು ಸಿಂಗಾಪುರದಿಂದ ಭಾರತಕ್ಕೆ ಸ್ಥಳಾಂತರಿಸಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

PhonePe ವಕ್ತಾರರು ತಮ್ಮ ಸಂಸ್ಥೆಯ ಪ್ರಧಾನ ಕಛೇರಿಯನ್ನು ಬದಲಾಯಿಸುವ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ.

“ನಾವು ನಮ್ಮ ನೋಂದಾಯಿತ ಘಟಕವನ್ನು ಸಿಂಗಾಪುರದಿಂದ ಭಾರತಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿದ್ದೇವೆ” ಎಂದು PhonePe ವಕ್ತಾರರು ತಿಳಿಸಿದ್ದಾರೆ.

PhonePe 250 ಮಿಲಿಯನ್ ನೋಂದಾಯಿತ ಬಳಕೆದಾರರ ಮೈಲಿಗಲ್ಲನ್ನು ದಾಟಿದೆ, 100 ಮಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರು (MAU) ಅಕ್ಟೋಬರ್ 2020 ರಲ್ಲಿ ಸುಮಾರು ಒಂದು ಬಿಲಿಯನ್ ಡಿಜಿಟಲ್ ಪಾವತಿ ವಹಿವಾಟುಗಳನ್ನು ನಡೆಸಿದ್ದಾರೆ.

ಆದರೆ ಸಂಸ್ಥೆಯ ಅತಿದೊಡ್ಡ ಷೇರುದಾರ ಫ್ಲಿಪ್‌ಕಾರ್ಟ್ ಮಾತ್ರ ಸಿಂಗಾಪುರದಲ್ಲಿ ತನ್ನ ಪ್ರಧಾನ ಕಛೇರಿಯನ್ನು ಮುಂದುವರಿಸುತ್ತದೆ ಮತ್ತು ಕಛೇರಿ ಬದಲಾಯಿಸುವ ಯಾವುದೇ ನಿರ್ಧಾರವನ್ನು ಹೊಂದಿಲ್ಲ ಎನ್ನಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top