News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತವನ್ನು ಅತ್ಯುತ್ತಮ ಸ್ನೇಹಿತ ಎಂದು ಪರಿಗಣಿಸಿದ್ದಾರೆ 69% ಅಫ್ಘನ್ನರು: ಸಮೀಕ್ಷೆ

ನವದೆಹಲಿ: ನೆರೆಹೊರೆ ಮೊದಲು ಎಂಬ ನೀತಿಯನ್ನು ಪಾಲಿಸಿಕೊಂಡು ಬರುತ್ತಿರುವ ಭಾರತ ನೆರೆಯ ದೇಶಗಳಿಗೆ ಆಪತ್ತು ಬಂದಾಗ ಮೊದಲಿಗನಾಗಿ ಸ್ಪಂದಿಸುತ್ತದೆ.‌ ಶ್ರೀಲಂಕಾವಿರಲಿ, ಅಫ್ಘಾನಿಸ್ಥಾನವಿರಲಿ ಅಥವಾ ನೇಪಾಳವಿರಲಿ ತನ್ನ ನೆರೆಯ ದೇಶಗಳ ಸಂಕಷ್ಟದ ಸಂದರ್ಭದಲ್ಲಿ ನೆರವು ನೀಡುವ ಮೂಲಕ ಭಾರತ ತಾನು ಅತ್ಯುತ್ತಮ ಸ್ನೇಹಿತ ಎಂಬುದನ್ನು ಸಾಬೀತು ಮಾಡಿದೆ. ಅದೇ ರೀತಿ ನೆರೆಹೊರೆಯ ದೇಶಗಳ ಜನರು ಕೂಡ ಭಾರತವನ್ನು ತಮ್ಮ ಅತ್ಯುತ್ತಮ ಮಿತ್ರ ರಾಷ್ಟ್ರ ಎಂದೇ ಭಾವಿಸಿದ್ದಾರೆ.‌

ಇತ್ತೀಚಿಗೆ ನಡೆದ ಸಮೀಕ್ಷೆಯೊಂದರ ಪ್ರಕಾರ, ಶೇಕಡ 69ರಷ್ಟು ಅಫ್ಘನ್ನರು ಭಾರತವನ್ನು ತಮ್ಮ ಅತ್ಯುತ್ತಮ ಸ್ನೇಹಿತ ದೇಶ ಎಂದು ಪರಿಗಣಿಸಿದ್ದಾರೆ .

ಬ್ರಸೆಲ್ಸ್ ಮೂಲದ ಸುದ್ದಿ ವೆಬ್‌ಸೈಟ್ EU ರಿಪೋರ್ಟರ್, ಅಫ್ಘಾನಿಸ್ಥಾನ ಜನರ ಅಭಿಪ್ರಾಯ ಪಡೆಯಲು, ಅವರ ಹಿಂದಿನ, ಪ್ರಸ್ತುತ ಸನ್ನಿವೇಶ ಮತ್ತು ಅವರ ಭವಿಷ್ಯದ ಆಕಾಂಕ್ಷೆಗಳ ಬಗ್ಗೆ ತಿಳಿಯಲು ಸಮೀಕ್ಷೆಯನ್ನು ನಡೆಸಿದೆ.

ಸಮೀಕ್ಷೆಯ ಪ್ರಕಾರ, ಶೇಕಡಾ 67 ಕ್ಕಿಂತ ಹೆಚ್ಚು ಅಫ್ಘಾನಿಸ್ಥಾನಿ ಜನರು ಅಮೆರಿಕಾದ ತಪ್ಪಾದ ನಿರ್ಧಾರ ಮತ್ತು ನಿರ್ವಹಣೆ ಪಾಕಿಸ್ಥಾನ ಮತ್ತು ಚೀನಾಕ್ಕೆ ಕಾಬೂಲ್ ಅನ್ನು ವಶಪಡಿಸಿಕೊಳ್ಳಲು ತಾಲಿಬಾನ್ ಅನ್ನು ಪ್ರೋತ್ಸಾಹಿಸುವ ಅವಕಾಶವನ್ನು ನೀಡಿತು ಎಂದು ನಂಬಿದ್ದಾರೆ ಎಂಬುದನ್ನು ತೋರಿಸಿದೆ.

ಭಾರತ ಮತ್ತು ಅಫ್ಘಾನಿಸ್ಥಾನವು ಅತ್ಯಂತ ಪ್ರಾಚೀನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿದೆ. ಪಾಕಿಸ್ಥಾನದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, 1990 ರ ದಶಕದಲ್ಲಿ ಮತ್ತು ಕಳೆದ ವರ್ಷ ಆಗಸ್ಟ್‌ನಿಂದ ತಾಲಿಬಾನ್ ಆಳ್ವಿಕೆಯವರೆಗೂ ಎರಡು ದೇಶಗಳ ನಡುವಿನ ಸಂಬಂಧಗಳು ಉತ್ತಮವಾಗಿತ್ತು. ಅಫ್ಘಾನಿಸ್ಥಾನದಲ್ಲಿ ಭಾರತವು ಬಲವಾದ ಹಕ್ಕನ್ನು ಮತ್ತು ಕಾರ್ಯತಂತ್ರದ ಹಿತಾಸಕ್ತಿಗಳನ್ನು ಹೊಂದಿದೆ. ಭಾರತವು ಅಫ್ಘಾನಿಸ್ಥಾನಕ್ಕೆ ಅತಿ ದೊಡ್ಡ ದಾನಗಳನ್ನು ಮಾಡಿದೆ, ಸುಮಾರು 3 ಶತಕೋಟಿ ಡಾಲರ್‌ಗಳನ್ನು ಅಫ್ಘಾನ್‌ಗಾಗಿ ಖರ್ಚು ಮಾಡಿದೆ. ಭಾರತವು ಅಫ್ಘಾನಿಸ್ಥಾನಕ್ಕೆ ವಿಶ್ವದಲ್ಲಿ ಐದನೇ ಅತಿದೊಡ್ಡ ದಾನಿಯಾಗಿದೆ. ಮೂಲಸೌಕರ್ಯಗಳನ್ನು ನಿರ್ಮಿಸುವುದರಿಂದ ಹಿಡಿದು ವೈದ್ಯಕೀಯ ಸಿಬ್ಬಂದಿ ಮತ್ತು ಆಹಾರದ ತಂಡಗಳನ್ನು ಕಳುಹಿಸುವವರೆಗೆ ಭಾರತ ಆ ದೇಶಕ್ಕೆ ಸಹಾಯ ಮಾಡಿದೆ.

ಆಫ್ಘನ್ನರು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬರುತ್ತಿದ್ದಾರೆ. ಅಫ್ಘಾನ್ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ದಾಖಲಾಗಿದ್ದಾರೆ. ತಾಲಿಬಾನ್ ಆಳ್ವಿಕೆಯಲ್ಲಿರುವ ಅಫ್ಘಾನಿಸ್ಥಾನಕ್ಕೆ ಮಾನವೀಯ ನೆರವಿನ ಪೂರೈಕೆದಾರರಲ್ಲಿ ಭಾರತವೂ ಸೇರಿದೆ.

ಈ ತಿಂಗಳ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗಿದ್ದು, ಒಟ್ಟು 2,003 ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಾಗಿದೆ. ಈ ಅಧ್ಯಯನದಲ್ಲಿ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಹೆಚ್ಚಿನ ಆಫ್ಘನ್ನರು ತಮ್ಮನ್ನು ಪ್ರತಿನಿಧಿಸುವ ನಾಯಕರನ್ನು ಆಯ್ಕೆ ಮಾಡಲು ಚುನಾವಣೆಗಳನ್ನು ಬಯಸುತ್ತಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top