News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರನಿಲ್‌ ವಿಕ್ರಮಸಿಂಘೆ ಆಯ್ಕೆ

ಕೊಲಂಬೊ: ಭಾರೀ ಆರ್ಥಿಕ ಬಿಕ್ಕಟ್ಟಿನ ನಡುವೆ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಇಂದು ಆಯ್ಕೆಯಾಗಿದ್ದಾರೆ. ಗೋಟಾಬಯ ರಾಜಪಕ್ಸೆ ರಾಜೀನಾಮೆ ನೀಡಿದ ನಂತರ ವಿಕ್ರಮಸಿಂಘೆ ಅವರು ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ನಿರ್ಣಾಯಕ ಚುನಾವಣೆಯನ್ನು ಬಿಗಿ ಭದ್ರತೆಯ ನಡುವೆ ರಹಸ್ಯ ಮತದಾನದ ಮೂಲಕ ನಡೆಸಲಾಯಿತು, ಈ ಸಂದರ್ಭದಲ್ಲಿ 223 ಶಾಸಕರು ಮತ ಚಲಾಯಿಸಿದರೆ ಇಬ್ಬರು ಸಂಸದರು ಗೈರುಹಾಜರಾಗಿದ್ದರು. ಚುನಾವಣೆಯಲ್ಲಿ ಗೆಲ್ಲಲು 225 ಸದಸ್ಯರ ಸದನದಲ್ಲಿ 113 ರ ಮ್ಯಾಜಿಕ್‌ ನಂಬರ್ ಪಡೆಯುವುದು ಅಭ್ಯರ್ಥಿಗೆ ಅಗತ್ಯವಾಗಿತ್ತು. ಇಬ್ಬರು ಹಿರಿಯ ರಾಜಪಕ್ಸೆ ಸಹೋದರರಾದ ಮಹಿಂದ ಮತ್ತು ಚಮಲ್ ಕೂಡ ಮತದಾನದ ವೇಳೆ ಹಾಜರಿದ್ದರು.

44 ವರ್ಷಗಳಲ್ಲಿ ಶ್ರೀಲಂಕಾ ಸಂಸತ್ತು ನೇರವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಿರುವುದು ಇದೇ ಮೊದಲು. 1982, 1988, 1994, 1999, 2005, 2010, 2015 ಮತ್ತು 2019 ರ ಅಧ್ಯಕ್ಷೀಯ ಚುನಾವಣೆಗಳಲ್ಲಿ ಅಲ್ಲಿ ಅಧ್ಯಕ್ಷರ ಆಯ್ಕೆ ನಡೆದಿತ್ತು.

ಆರು ಬಾರಿ ಪ್ರಧಾನಿಯಾಗಿರುವ ವಿಕ್ರಮಸಿಂಘೆ ಮುಂದೆ ಅಧ್ಯಕ್ಷರಾಗಿ ದೊಡ್ಡ ಸವಾಲು ಇದೆ.  ಶ್ರೀಲಂಕಾ ಪ್ರತಿಭಟನಾಕಾರರು ಮಾತ್ರ ವಿಕ್ರಮಸಿಂಘೆ ಅವರ ರಾಜೀನಾಮೆಯನ್ನೂ ಕೂಡ ಬಯಸಿದ್ದರು, ಅವರ ಮನವೊಲಿಸುವ ಜವಾಬ್ದಾರಿಯೂ ಅವರ ಮೇಲೆ ಇದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top