News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೇ 2022 ರಲ್ಲಿ ಭಾರತದ ಖನಿಜ ಉತ್ಪಾದನೆ 10.9% ಏರಿಕೆ

ನವದೆಹಲಿ: 2022 ರ ಮೇ ತಿಂಗಳಿನಲ್ಲಿ ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ ವಲಯದ ಖನಿಜ ಉತ್ಪಾದನೆಯ ಭಾರತದ ಸೂಚ್ಯಂಕವು ಶೇ.120.1 ರಷ್ಟಿದ್ದು, ಕಳೆದ ವರ್ಷದ ಇದೇ ತಿಂಗಳ ಮಟ್ಟಕ್ಕೆ ಹೋಲಿಸಿದರೆ 10.9% ಹೆಚ್ಚಾಗಿದೆ ಎಂದು ಸೋಮವಾರ ಅಧಿಕೃತ ಪ್ರಕಟಣೆ ತಿಳಿಸಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2022-23 ರ ಏಪ್ರಿಲ್-ಮೇ ಅವಧಿಯಲ್ಲಿ ಖನಿಜ ಉತ್ಪಾದನೆಯ ಬೆಳವಣಿಗೆಯು 9.4 ಶೇಕಡಾ ಹೆಚ್ಚಾಗಿದೆ ಎಂದು ಗಣಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಇಂಡಿಯನ್ ಬ್ಯೂರೋ ಆಫ್ ಮೈನ್ಸ್ (IBM) ನ ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ, ಮೇ 2022 ರಲ್ಲಿ ಪ್ರಮುಖ ಖನಿಜಗಳ ಉತ್ಪಾದನೆಯ ಮಟ್ಟ- ಕಲ್ಲಿದ್ದಲು 712 ಲಕ್ಷ ಟನ್‌ಗಳು, ಲಿಗ್ನೈಟ್ 42 ಲಕ್ಷ ಟನ್‌ಗಳು, ನೈಸರ್ಗಿಕ ಅನಿಲ  2846 ಮಿಲಿಯನ್ ಕ್ಯೂಬಿಕ್ ಮೀಟರ್, ಪೆಟ್ರೋಲಿಯಂ (ಕಚ್ಚಾ) 26 ಲಕ್ಷ ಟನ್, ಬಾಕ್ಸೈಟ್ 2276 ಸಾವಿರ ಟನ್, ಕ್ರೋಮೈಟ್ 320 ಸಾವಿರ ಟನ್, ತಾಮ್ರ 8 ಸಾವಿರ ಟನ್, ಚಿನ್ನ 97 ಕೆ.ಜಿ, ಕಬ್ಬಿಣದ ಅದಿರು 221 ಲಕ್ಷ ಟನ್, ಸೀಸ 30 ಸಾವಿರ ಟನ್, ಮ್ಯಾಂಗನೀಸ್ ಅದಿರು 235 ಸಾವಿರ ಟನ್, 1 ಲಕ್ಷ 29 ಸಾವಿರ ಟನ್ ಝಿಂಕ್, ಫಾಸ್ಫೊರೈಟ್ 143 ಸಾವಿರ ಟನ್, ಮ್ಯಾಗ್ನೆಸೈಟ್ 8 ಸಾವಿರ ಟನ್ ಮತ್ತು ಡೈಮಂಡ್ 22 ಕ್ಯಾರೆಟ್ ಎಂದು ಸಚಿವಾಲಯ ತಿಳಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top