ಪಾಟ್ನಾ: ತರಗತಿಗೆ ವಿದ್ಯಾರ್ಥಿಗಳೇ ಬರುತ್ತಿಲ್ಲ, ಕಲಿಸಲು ನನಗೆ ಅವಕಾಶವೇ ಸಿಕ್ಕಿಲ್ಲ ಎಂದು ಆರೋಪಿಸಿ ಬಿಹಾರದ ಕಾಲೇಜೊಂದರ ಪ್ರಾಧ್ಯಾಪಕರು ತಮ್ಮ 2 ವರ್ಷ 9 ತಿಂಗಳ ವೇತನ 24 ಲಕ್ಷ ರೂಪಾಯಿಗಳನ್ನು ವಾಪಾಸ್ ವಿಶ್ವವಿದ್ಯಾಲಯಕ್ಕೆಯೇ ನೀಡಿದ ಘಟನೆ ಬಿಹಾರದಲ್ಲಿ ನಡೆದಿದೆ.
ಮುಜಫ್ಫರ್ಪುರದ ನಿತೀಶ್ವರ್ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಲಲ್ಲನ್ ಕುಮಾರ್ ವೇತನ ಹಿಂದುರುಗಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಅಸಮಾಧಾನವನ್ನು ಹೊರ ಹಾಕಿದ ಪ್ರಾಧ್ಯಾಪಕ.
ವರ್ಗಾವಣೆ ನೀಡಿ ಎಂದೂ ಕೋರಿದರೂ ವಿಶ್ವವಿದ್ಯಾಲಯ ಮನ್ನಣೆ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
“ಕೆಲಸಕ್ಕೆ ಸೇರಿದಾಗ ಸ್ನಾತಕೋತ್ತರ ತರಗತಿಗಳಿಗೆ ಕಲಿಸುವ ಅವಕಾಶವಿರುವ ಕಾಲೇಜಿಗೆ ನನ್ನನ್ನು ನೇಮಿಸಲಿಲ್ಲ. ಆಯ್ಕೆ ಪ್ರಕ್ರಿಯೆಯಲ್ಲಿ ಕಡಿಮೆ ಶ್ರೇಣಿಯನ್ನು ಹೊಂದಿರುವವರು ಉತ್ತಮ ಕಾಲೇಜಿಗೆ ಪೋಸ್ಟಿಂಗ್ಗಳನ್ನು ಪಡೆದರು. ಈ ಕಾಲೇಜಿನ ತರಗತಿಗಳಿಗೆ ವಿದ್ಯಾರ್ಥಿಗಳು ಬರುವುದೇ ಇಲ್ಲ. ವರ್ಗಾವಣೆ ಪಟ್ಟಿಯಿಂದ ನನ್ನ ಹೆಸರನ್ನು ಪದೇ ಪದೇ ಕೈ ಬಿಡಲಾಗಿದೆ” ಎಂದಿದ್ದಾರೆ.
ಸದ್ಯ ಅವರು ವಾಪಾಸ್ ನೀಡಿದ ವೇತನವನ್ನು ಏನು ಮಾಡಬೇಕು ಎಂಬ ಗೊಂದಲದಲ್ಲ ವಿಶ್ವವಿದ್ಯಾಲಯ ಇದೆ.
ವಿಶ್ವವಿದ್ಯಾಲಯವು ತಮ್ಮನ್ನು ಬೇರೊಂದು ಕಾಲೇಜಿಗೆ ವರ್ಗಾವಣೆ ಮಾಡದಿದ್ದರೆ ನನಗೆ ಶೈಕ್ಷಣಿಕ ಸಾವು ಬರಲಿದೆ ಎಂದು ಡಾ.ಲಲ್ಲನ್ ಕುಮಾರ್ ಹೇಳಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.