ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಸ್ವಾಮಿ ರಾಮಾನುಜಾಚಾರ್ಯರ ಪ್ರತಿಮೆಯನ್ನು ಗೃಹ ಸಚಿವ ಅಮಿತ್ ಶಾ ಇಂದು ಅನಾವರಣಗೊಳಿಸಿಲಿದ್ದಾರೆ. ʼಶಾಂತಿಯ ಪ್ರತಿಮೆʼಯಾಗಿ ಇದನ್ನು ಸ್ಥಾಪನೆ ಮಾಡಲಾಗಿದೆ.
ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇದನ್ನು ಶಾ ಅನಾವರಣಗೊಳಿಸಿದ್ದಾರೆ.
ರಾಮಾನುಜಾಚಾರ್ಯರನ್ನು ವೈದಿಕ ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಎಂದು ಗೌರವಿಸಲಾಗುತ್ತದೆ. ಅವರು ಭಾರತದಾದ್ಯಂತ ಪ್ರಯಾಣಿಸಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ ಮಹಾನ್ ಸಂತ.
ರಾಮಾನುಜಾಚಾರ್ಯರು ಭಕ್ತಿ ಚಳುವಳಿಯನ್ನು ಪುನರುಜ್ಜೀವನಗೊಳಿಸಿದರು ಮತ್ತು ಅವರ ಉಪದೇಶಗಳು ಇತರ ಭಕ್ತಿ ಶಾಲೆಗಳ ಚಿಂತನೆಯನ್ನು ಪ್ರೇರೇಪಿಸಿತು. ಅನ್ನಮಾಚಾರ್ಯ, ಭಕ್ತ ರಾಮದಾಸ್, ತ್ಯಾಗರಾಜ, ಕಬೀರ್ ಮತ್ತು ಮೀರಾಬಾಯಿಯಂತಹ ಕವಿಗಳಿಗೆ ಇವರು ಸ್ಫೂರ್ತಿಯಗಿದ್ದರು ಎಂದು ಪರಿಗಣಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.