ಪಣಜಿ: ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುವ ಅವಕಾಶವನ್ನು ಪಡೆದ ಗೋವಾದ ಒಲಿಂಪಿಕ್ ಬಂಗಾರ ವಿಜೇತೆ ಸೋನಿಯಾ ಎಲ್ಲಪ್ಪಾ ಪಾಟೀಲ್ಗೆ ಈಗಲೂ ತಾನು ಪ್ರಶ್ನಿಸಿದ್ದು ಪ್ರಧಾನಿಯನ್ನು ಎಂಬುದು ತಿಳಿದಿಲ್ಲ.
ಹೌದು, ಬೌದ್ಧಿಕ ವಿಕಲಚೇತನೆಯಾಗಿರುವ 16 ವರ್ಷದ ಸೋನಿಯಾ ಮೋದಿಗೆ ಪ್ರಶ್ನೆ ಕೇಳಿದ್ದಾಳೆ, ಅಷ್ಟೇ ಅಲ್ಲ ಅವರು ಕೇಳಿದ ಪ್ರಶ್ನೆಗೂ ಸಮರ್ಥ ಉತ್ತರ ನೀಡಿದ್ದಾಳೆ. ಆಕೆಯ ಈ ಸಾಧನೆಗೆ ಗೆಳೆಯ ಗೆಳತಿಯರು, ಶಿಕ್ಷಕರು ಎಲ್ಲರೂ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. ಆದರೆ ಆಕೆಗೆ ಮಾತ್ರ ತಾನು ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಗಡ್ಡಧಾರಿ ನಗುಮುಖದ ಮನುಷ್ಯ ಯಾರೆಂದು ತಿಳಿದಿಲ್ಲ. ಆಕೆಗೆ ಅವರು ದೇಶದ ಒಬ್ಬ ಮಂತ್ರಿ ಎಂಬುದಷ್ಟೇ ತಿಳಿದಿದೆ.
‘ನಾನು ಮಂತ್ರಿಯೊಂದಿಗೆ ಮಾತನಾಡಿದೆ, ’ನೀನು ದೇಶಕ್ಕೆ ಏನು ತಂದೆ?’ ಎಂದು ಕೇಳಿದರು, ’ನಾನು ಪದಕ ತಂದಿದ್ದೇನೆ’ ಎಂದು ಹೇಳಿದೆ. ನಾನು ಅವರೊಂದಿಗೆ ಮಾತನಾಡುವುದನ್ನು ನನ್ನ ಶಾಲೆಯಲ್ಲಿರುವ ಎಲ್ಲರೂ ನೋಡಿದರು. ಅವರೆಲ್ಲಾ ನನಗೆ ಅಭಿನಂದನೆ ಹೇಳಿದರು’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವಳು ಉತ್ತರಿಸಿದ್ದಾಳೆ.
ಬೌದ್ಧಿಕವಾಗಿ ವಿಕಲಚೇತನಳಾಗಿರುವ ಸೋನಿಯಾಳನ್ನು ಮೋದಿಯ ಸಂವಾದ ಕಾರ್ಯಕ್ರಮಕ್ಕೆ ಸಿದ್ಧಳಾಗುವಂತೆ ಮಾಡುವುದು ಶಿಕ್ಷಕರಿಗೆ ಸವಾಲೆ ಆಗಿತ್ತು. ತರಬೇತಿ ನೀಡುವ ವೇಳೆ ಆಕೆ ಆತ್ವವಿಶ್ವಾಸವನ್ನೇ ಕಳೆದುಕೊಂಡಿದ್ದಳು. ಆದರೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಮೋದಿ ಮಾತನಾಡಿದಾಗ ಆಕೆ ಅವರೊಂದಿಗೆ ಉತ್ತಮವಾಗಿ ನಮ್ಮ ನಿರೀಕ್ಷೆಗೂ ಮೀರಿ ಸ್ಪಂದಿಸಿದ್ದಾಳೆ. ಸುಲಲಿತವಾಗಿ ಅವರನ್ನು ಪ್ರಶ್ನಿಸಿದ್ದಾಳೆ. ಇದೆಲ್ಲಾ ನಮಗೆ ಹೆಮ್ಮೆ ತಂದಿದೆ ಎಂದು ಶಿಕ್ಷಕರು ಹೇಳಿಕೊಂಡಿದ್ದಾರೆ.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೇಶದ 10 ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ ನಡೆಸಿದ್ದಾರೆ. ಅದರಲ್ಲಿ ಸೋನಿಯಾ ಕೂಡ ಒಬ್ಬಳು. ಮಕ್ಕಳೊಂದಿಗೆ ಮಕ್ಕಳಂತೆಯೇ ಮಾತನಾಡಿದ ಮೋದಿ ಮಕ್ಕಳನ್ನು ಕೊಂಚವೂ ಗೊಂದಲಕ್ಕೀಡು ಮಾಡದೆ ಸಾಮಾನ್ಯನಂತೆ ಸಂವಾದಿಸಿದರು. ಇದು ಮಕ್ಕಳ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.