ಶ್ರೀನಗರ: ಜಮ್ಮ ಮತ್ತು ಕಾಶ್ಮೀರವನ್ನು ಭಯೋತ್ಪಾದಕರಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ನಿರಂತರವಾಗಿ ಕಾರ್ಯಾಚರಣೆಯನ್ನು ನಡೆಸುತ್ತಲೇ ಇವೆ.
ನಿನ್ನೆ ಬಂಡೀಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ನಡೆಸಿ ಲಷ್ಕರ್-ಇ-ತೋಯ್ಬಾ ಸಂಘಟನೆಯ ಉಗ್ರನನ್ನು ಬಂಧಿಸಿವೆ. ಬಂಧಿತ ಉಗ್ರನನ್ನು ನಡಿಹಾಲ್ ನಿವಾಸಿ ಮೆಹಬೂಬ್ ಕಾಲ್ ಇನಾಮ್ ಎಂದು ಗುರುತಿಸಲಾಗಿದೆ.
ಅಲ್ಲದೆ ಕಾರ್ಯಾಚರಣೆಯ ಸಂದರ್ಭದಲ್ಲಿ ಉಗ್ರರ ಅಡಗುತಾಣಗಳನ್ನು ಭದ್ರತಾ ಪಡೆ ಧ್ವಂಸ ಮಾಡಿದೆ. ಅಡಗುತಾಣಗಳನ್ನು ಧ್ವಂಸಮಾಡುವ ವಿಡಿಯೋವನ್ನು ಡ್ರೋನ್ ಮೂಲಕ ಚಿತ್ರೀಕರಿಸಲಾಗಿದೆ.
ಬಂಧಿತ ಉಗ್ರರು ನೀಡಿದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಭದ್ರತಾ ಸಿಬ್ಬಂದಿ 2 ಕೆಜಿಯಷ್ಟು ಸ್ಪೋಟಕ ಸಾಮಗ್ರಿಗಳು, 3 ಎಕೆ ರೈಫಲ್ಸ್, 10 ಮ್ಯಾಗಜಿನ್, ಚೀನಾ ಗ್ರೇನೇಡ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
#WATCH | J&K: Drone footage of terrorist hideout being destroyed by security forces in Nadihal area of Bandipora after LeT hybrid terrorist was arrested today.
(Source: Army) pic.twitter.com/oz358tMa0Y
— ANI (@ANI) June 29, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.