ನವದೆಹಲಿ: ‘ವಯಸ್ಸು ಕೇವಲ ಒಂದು ಸಂಖ್ಯೆ’ ಎಂದು ಹರಿಯಾಣದ 105 ವರ್ಷದ ಮಹಿಳೆ ಸಾಬೀತುಪಡಿಸಿ ತೋರಿಸಿದ್ದಾರೆ. 100 ಮೀಟರ್ ಓಟದಲ್ಲಿ ಚಿನ್ನವನ್ನು ಗೆಲ್ಲುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ.
ಗುಜರಾತ್ನ ವಡೋದರದಲ್ಲಿ ನಡೆದ ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 100 ಮೀಟರ್ ಓಟದಲ್ಲಿ ಕೇವಲ 45.40 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಪದಕ ಗೆದ್ದಕೊಂಡಿದ್ದಾರೆ. ಅವರ ಫಿಟ್ನೆಸ್ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿಯಾಗಿದೆ.
ಹರಿಯಾಣದ ರಾಂಬಾಯಿ ಈ ಸಾಧನೆ ಮಾಡಿದ ಹಿರಿಯಜ್ಜಿ. ಕಳೆದ ವರ್ಷ ನವೆಂಬರ್ನಲ್ಲಿ ವಾರಣಾಸಿಯಲ್ಲಿ ನಡೆದ ಓಟದಲ್ಲಿ ಅವರು ಪದಕ ಜಯಿಸಿದ್ದಾರೆ. ಅಂದಿನಿಂದ ಮಹಾರಾಷ್ಟ್ರ, ಕರ್ನಾಟಕ, ಕೇರಳದ ಈವೆಂಟ್ಗಳಲ್ಲಿ ಭಾಗಿಯಾಗಿ ಸಾಕಷ್ಟು ಪದಕಗಳನ್ನು ಜಯಿಸಿದ್ದಾರೆ.
ಭಾನುವಾರದಂದು ಮುಕ್ತಾಯಗೊಂಡ ವಡೋದರಾ ಈವೆಂಟ್ನಲ್ಲಿ, 85 ವರ್ಷಕ್ಕಿಂತ ಮೇಲ್ಪಟ್ಟವರಿಗಾಗಿ ಮೀಸಲಾದ ಓಟದ ಸ್ಪರ್ಧೆಯಲ್ಲಿ ರಂಬಾಯಿ ಒಬ್ಬರೇ ಭಾಗವಹಿಸಿದ್ದರು ಮತ್ತು ಅದಕ್ಕಾಗಿ ಅವರು ಸನ್ಮಾನಿಸಲ್ಪಟ್ಟಿದ್ದಾರೆ. ಜೂನ್ 15 ರಂದು 100 ಮೀ ಮತ್ತು ಭಾನುವಾರ 200 ಮೀ ಓಟದಲ್ಲಿ ಭಾಗವಹಿಸುವ ಮೂಲಕ ಪದಕವನ್ನು ಜಯಿಸಿದ್ದಾರೆ. 1 ನಿಮಿಷ 52.17 ಸೆಕೆಂಡುಗಳಲ್ಲಿ ಗುರಿ ತಲುಪಿದ್ದಾರೆ. ಅಷ್ಟೇ ಅಲ್ಲ, 100 ಮೀ ಓಟದಲ್ಲಿ 45.40 ಸೆಕೆಂಡ್ಗಳಲ್ಲಿ ಗುರಿ ತಲುಪಿದ ರಂಬಾಯಿ 100 ಮೀಟರ್ ಓಟವನ್ನು 74 ಸೆಕೆಂಡುಗಳಲ್ಲಿ ಓಡಿ ವಿಶ್ವ ಮಾಸ್ಟರ್ಸ್ನಲ್ಲಿ ಚಿನ್ನ ಗೆದ್ದ 101 ವರ್ಷದ ಮಾನ್ ಕೌರ್ ಅವರ ದಾಖಲೆಯನ್ನು ಮುರಿದಿದ್ದಾರೆ.
At 105 years, super grandma sprints new 100m record. #Rambai ran alone in #Vadodara as there was no competitor above 85 competing at the National Open Masters Athletics Championship pic.twitter.com/iCIPTOkuFt
— TOI Bengaluru (@TOIBengaluru) June 21, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.